ಜ್ವರದಿಂದ ವಿದ್ಯಾರ್ಥಿನಿ ಮೃತ್ಯು

Published on

ಕಾಸರಗೋಡು: ಜ್ವರಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ನಾಲ್ಕನೇ ತರಗತಿ ವಿದ್ಯಾರ್ಥಿನಿ ಕಾಸರಗೋಡಿನ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದಾಳೆ. ಉದುಮ ಕೋಕಾಲ್ ನಿವಾಸಿ ರಿಜೇಶ್-ಸಿತಾರಾ ದಂಪತಿ ಪುತ್ರಿ ಸಾತ್ವಿಕಾ(9) ಮೃತಪಟ್ಟ ಬಾಲಕಿ. ಈಕೆಗೆ ಮೂರು ದಿವಸಗಳ ಹಿಂದೆ ಜ್ವರ ಬಾಧಿಸಿದ್ದು, ಔಷಧ ಸೇವಿಸಿ ಗುಣಮುಖಳಾಗಿದ್ದಳು. ಸೋಮವಾರ ಮತ್ತೆ ಜ್ವರ ಉಲ್ಬಣಗೊಂಡಿತ್ತು. ತಕ್ಷಣ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದರೂ, ತಡರಾತ್ರಿ ಮೃತಪಟ್ಟಿದ್ದಾಳೆ. ಪಠ್ಯದೊಂದಿಗೆ ನೃತ್ಯ, ಚಿತ್ರ ರಚನೆಯಲ್ಲೂ ಸಾತ್ವಿಕಾ ಮುಂಚೂಣಿಯಲ್ಲಿದ್ದಳು. ಉದುಮ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ವಿದ್ಯಾರ್ಥಿನಿಯಾಗಿದ್ದಳು. ಬಾಲಕಿ ಮೃತದೇಹ ಶಾಲೆಯಲ್ಲಿ ಅಂತಿಮ ದರ್ಶನಕ್ಕಿರಿಸಿದ ಬಳಿಕ ಅಂತ್ಯಸಂಸ್ಕಾರ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net