ವಿದ್ಯುತ್ ಶಾಕ್‌ಗೆ ವಿದ್ಯಾರ್ಥಿನಿ ಬಲಿ

New Project (17)
Published on

ಕಾಸರಗೋಡು: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಪೆರ್ಲ ಸನಿಹದ ಕುದ್ವದಲ್ಲಿ ವಿದ್ಯುತ್ ತಂತಿಯಿಂದ ಶಾಕ್ ತಗುಲಿ ವಿದ್ಯಾರ್ಥಿನಿ ಮೃತಪಟ್ಟಿದ್ದು, ತಾಯಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ಸ್ಥಳೀಯ ನಿವಾಸಿ ಇಸ್ಮಾಯಿಲ್-ಅವ್ವಮ್ಮ ದಂಪತಿ ಪುತ್ರಿ ಫಾತಿಮಾ(17) ಮೃತ ವಿದ್ಯಾರ್ಥಿನಿ. ಮನೆ ತಾರಸಿ ಮೇಲೆ ಒಗೆದು ಒಣಗಲು ಹಾಕಿದ್ದ ಹಗ್ಗ, ಕಬ್ಬಿಣದ ಸಲಾಕೆ ಮನೆ ಸಮೀಪ ಹಾದುಹೋಗಿದ್ದ ಎಚ್‌ಟಿ ವಿದ್ಯುತ್ ತಂತಿ ಮೇಲೆ ಬಿದ್ದು ಶಾಕ್ ತಗುಲಿದೆ. ಆಕೆ ಬೊಬ್ಬಿಟ್ಟಾಗ ಪುತ್ರಿಯನ್ನು ರಕ್ಷಿಸಲು ಮುಂದಾದ ತಾಯಿಗೂ ಶಾಕ್ ತಗುಲಿತು. ಅಸ್ವಸ್ಥರಾದ ಅವರನ್ನು ಚೆಂಗಳದ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಚ್‌ಟಿ ವಿದ್ಯುತ್ ಕಂಬಕ್ಕೆ ಅಳವಡಿಸಿದ್ದ ಮೂರು ತಂತಿಗಳಲ್ಲಿ ಒಂದು ತಂತಿ ಟೆರೇಸ್ ಬಳಿ ನೇತಾಡುತ್ತಿದ್ದುದೇ ಅನಾಹುತಕ್ಕೆ ಕಾರಣ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net