ಅನಧಿಕೃತ ಈಜುಕೊಳದಲ್ಲಿ ವಿದ್ಯಾರ್ಥಿಯ ಸಾವು, ಮಾಲೀಕ ಪರಾರಿ..

PSX_20220301_201421
Published on

ವಿಜಯನಗರ: ಅನಧಿಕೃತವಾಗಿ ನಿರ್ಮಿಸಿದ್ದ ಈಜುಕೊಳವೊಂದರಲ್ಲಿ ಈಜಲು ಹೋದ ಯುವಕನೊಬ್ಬ ಸಾವಿಗೀಡಾಗಿದ್ದು, ಈಜುಕೊಳದ ಮಾಲೀಕ ಪರಾರಿ ಆಗಿದ್ದಾನೆ.‌

ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕು ಮಾಚಿಹಳ್ಳಿ ಗ್ರಾಮದ ಚೇತನ್ ಸಾವಿಗೀಡಾದ ವಿದ್ಯಾರ್ಥಿ. ದ್ವಿತೀಯ ಪಿಯುಸಿ ಓದುತ್ತಿದ್ದ ಚೇತನ್, ಸ್ನೇಹಿತರೊಂದಿಗೆ ಮೋಜಿಗಾಗಿ ತೆರಳಿದ್ದ ಜಾಗದಲ್ಲಿ ಈ ದುರಂತ ಸಂಭವಿಸಿದೆ.

ಶೃಂಗಾರತೋಟ ಸಮೀಪ ಇರುವ ನಂದಿ ವೈಟ್‌ಹೌಸ್‌ನಲ್ಲಿ ಈ ಅವಘಡ ಸಂಭವಿಸಿದೆ. ಸರ್ಕಾರದಿಂದ ಅನುಮತಿ ಪಡೆಯದೇ ಇಲ್ಲಿ ಈಜುಕೊಳ ಮತ್ತು ಫಂಕ್ಷನ್ ಹಾಲ್ ಕಟ್ಟಲಾಗಿದ್ದು, ಈ ದುರ್ಘಟನೆ ನಡೆಯುತ್ತಿದ್ದಂತೆ ನಂದಿ ವೈಟ್‌ಹೌಸ್ ಮಾಲೀಕ ರಾಜು ಪರಾರಿಯಾಗಿ ತಲೆಮರೆಸಿಕೊಂಡಿದ್ದಾರೆ. ಹರಪ್ಪನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net