ವೃದ್ಧಾಪ್ಯ ವೇತನ, ವಿಧವಾ ಪಿಂಚಣಿ ಮಾಸಾಶನಕ್ಕಾಗಿ ಪರದಾಟ…!

RNR- SERVER
Published on

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ
ವಿವಿಧ ಮಾಸಾಶನಗಳು ಸರಿಯಾದ ಸಮಯಕ್ಕೆ ವಿತರಣೆಯಾಗದೆ 4 ಸಾವಿರಕ್ಕೂ ಹೆಚ್ಚು ಲಾನುಭವಿಗಳು ಮಾಹಿತಿಗಾಗಿ ಪೋಸ್ಟ್ ಆಫೀಸ್, ಬ್ಯಾಂಕ್ ಹಾಗೂ ತಹಸೀಲ್ದಾರ್ ಕಚೇರಿಗೆ ಅಲೆದಾಡುವಂತಾಗಿದೆ.


ಸರ್ಕಾರ ವೃದ್ಧಾಪ್ಯ ವೇತನ, ವಿಧವಾ ಪಿಂಚಣಿ, ಅಂಗವಿಕಲ, ಸಂಧ್ಯಾ ಸುರಕ್ಷಾ, ಮನಸ್ವಿನಿ ಸೇರಿ ವಿವಿಧ ಮಾಸಾಶನಗಳನ್ನು ನೀಡುತ್ತಿದೆ. ಇದೀಗ 3 ತಿಂಗಳಿಂದ ಲಾನುಭವಿಗಳ ಖಾತೆಗೆ ಮಾಸಾಶನ ಜಮಾ ಆಗುತ್ತಿಲ್ಲ.

ಹೀಗಾಗಿ ಲಾನುಭವಿಗಳು ನಿತ್ಯ ಪಾಸ್‌ಬುಕ್ ಹಿಡಿದು ಓಡಾಡುವಂತಾಗಿದೆ.
ಮಾರ್ಚ್‌ನಿಂದ ಈವರೆಗೆ ಪಿಂಚಣಿ ಜಮೆಯಾಗದ ಕಾರಣ ಬಹುತೇಕ ಲಾನುಭವಿಗಳು ಆತಂಕ್ಕೀಡಾಗಿದ್ದಾರೆ. ತಮ್ಮನ್ನು ಯೋಜನೆಯಿಂದ ಕೈ ಬಿಡಲಾಗಿದೆಯೇ ಎಂಬ ಚಿಂತೆಯಲ್ಲಿ ನಿತ್ಯವೂ ತಹಸೀಲ್ದಾರ್ ಕಚೇರಿಗೆ ಆಗಮಿಸಿ ಖಾತೆ ಮಾಹಿತಿ ಪಡೆಯುತ್ತಿದ್ದಾರೆ.


ಕೆವೈಸಿ, ಆಧಾರ್ ನಂಬರ್ ಲಿಂಕ್ ಕಾರಣ: ಸರ್ಕಾರ ಈ ಹಿಂದೆ ಮನಿಆರ್ಡರ್ ಸೇರಿ ಇತರ ವ್ಯವಸ್ಥೆ ಮೂಲಕ ಲಾನುಭವಿಗಳಿಗೆ ಮಾಸಾಶನ ನೀಡುತ್ತಿತ್ತು. ಕಳೆದ ಮಾರ್ಚ್ ತಿಂಗಳಿಂದ ಡಿಬಿಟಿ ಮೂಲಕ ಮಾಸಾಶನವನ್ನು ನೇರವಾಗಿ ಲಾನುಭವಿಗಳ ಖಾತೆಗೆ ಜಮಾ ಮಾಡುತ್ತಿದೆ. ಆದರೆ, ಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ನಂಬರ್ ಲಿಂಕ್ ಮಾಡಿರಲೇಬೇಕು.

ಇಲ್ಲವಾದರೆ ಹಣ ಬರುವುದಿಲ್ಲ. ತಾಲೂಕಿನಲ್ಲಿ ಸುಮಾರು 4 ಸಾವಿರಕ್ಕೂ ಹೆಚ್ಚು ಜನರು ಇ ಕೆವೈಸಿ ಮಾಡಿಸದ ಕಾರಣ ಅವರಿಗೆ ಮಾಸಾಶನ ಜಮೆಯಾಗುತ್ತಿಲ್ಲ ಎನ್ನಲಾಗಿದೆ.


ತಾಲೂಕಿನಲ್ಲಿರುವ ಲಾನುಭವಿಗಳು
ತಾಲೂಕಿನಲ್ಲಿ ರೈತ ಆತ್ಮಹತ್ಯೆ ಪ್ರಕರಣದ 74 ಜನ, ಮನಸ್ವಿನಿ 268, ಮೈತ್ರಿ ಯೋಜನೆ 20, ಅಂಗವಿಕಲ 3,299 (1400 ರೂ.), ಅಂಗವಿಕಲ 5,801 (600 ರೂ.), ವಿಧವಾ ವೇತನ 18,610, ಇಂದಿರಾಗಾಂ ರಾಷ್ಟ್ರೀಯ ವೃದ್ಧಾಪ್ಯ ಯೋಜನೆ 7,082, ಸಂಧ್ಯಾ ಸುರಕ್ಷಾದಲ್ಲಿ 19,271 ಸೇರಿ ಒಟ್ಟು 54,425 ಲಾನುಭವಿಗಳಿದ್ದಾರೆ.


ಯಾವ ಯೋಜನೆಗೆ ಎಷ್ಟು ಹಣ…?


ಸಂಧ್ಯಾ ಸುರಕ್ಷಾ 1200 ರೂ., ಮೈತ್ರಿ ಯೋಜನೆಯಲ್ಲಿ 600 ರೂ., ಅಂಗವಿಕಲ (ಶೇ. 45) 800 ರೂ., ಅಂಗವಿಕಲ (ಶೇ. 75) 1400 ರೂ., ಅಂಗವಿಕಲ (ಮಾನಸಿಕ) 2 ಸಾವಿರ ರೂ., ಇಂದಿರಾಗಾಂ ರಾಷ್ಟ್ರೀಯ ಪಿಂಚಣಿ ಯೋಜನೆ (64 ರಿಂದ 65 ವಯಸ್ಸು)ಯಲ್ಲಿ 600 ರೂ., ಇಂದಿರಾಗಾಂ ರಾಷ್ಟ್ರೀಯ ಪಿಂಚಣಿ (65 ವರ್ಷ ಮೇಲ್ಪಟ್ಟು) 1200 ರೂ., ಮನಸ್ವಿನಿ 600 ರೂ., ವಿಧವಾ ಯೋಜನೆ 800 ರೂ. ಹಾಗೂ ರೈತ ಆತ್ಮಹತ್ಯೆಗೆ 2 ಸಾವಿರ ರೂ. ಪಿಂಚಣಿ ನೀಡಲಾಗುತ್ತಿದೆ.

ಸರ್ಕಾರದ ಸಾಮಾಜಿಕ ಭದ್ರತೆ ಯೋಜನೆಯಡಿ ಮಾಸಾಶನ ತೆಗೆದುಕೊಳ್ಳುತ್ತಿರುವ ಎಲ್ಲ ಲಾನುಭವಿಗಳು ಬ್ಯಾಂಕ್ ಖಾತೆಗೆ ಇ ಕೆವೈಸಿ ಹಾಗೂ ಆಧಾರ್ ಲಿಂಕ್ ಮಾಡಿಸಿಕೊಳ್ಳಬೇಕು. ಅಂದಾಗ ಮಾತ್ರ ಮಾಸಾಶನ ಲಾನುಭವಿಗಳ ಖಾತೆಗೆ ಜಮಾ ಆಗುತ್ತದೆ. ಈ ಬಗ್ಗೆ ಲಾನುಭವಿಗಳಿಗೆ ಮನೆ ಮನೆಗೆ ತೆರಳಿ ತಿಳಿಸಿದ್ದೇವೆ. ಆದಷ್ಟು ಬೇಗ ಎಲ್ಲರೂ ಮಾಡಿಸಿಕೊಳ್ಳಬೇಕು. - ಕೆ. ಗುರುಬಸವರಾಜ ತಹಸೀಲ್ದಾರ್ ರಾಣೆಬೆನ್ನೂರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net