ಹೋರಾಟದಿಂದ ಬೇಡಿಕೆ ಈಡೇರಿಸಿಕೊಳ್ಳಿ

kustagi
ಹಿರೇಮನ್ನಾಪುರದ ವಾಲ್ಮೀಕಿ ಗುರುಕುಲಾಶ್ರಮ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ವಾಲ್ಮೀಕಿ ಜನಜಾಗೃತಿ ಸಮಾವೇಶವನ್ನು ಶಾಸಕ ದೊಡ್ಡನಗೌಡ ಪಾಟೀಲ್ ಉದ್ಘಾಟಿಸಿದರು. ಹೋರಾಟಗಾರರಾದ ಭಾಸ್ಕರ್ ಪ್ರಸಾದ್, ಚಳವಳಿ ರಾಜಣ್ಣ ಇತರರು ಇದ್ದರು.
Published on

ಕುಷ್ಟಗಿ: ವಾಲ್ಮೀಕಿ ಸಮುದಾಯದವರು ಹುಟ್ಟಿನಿಂದಲೇ ನಾಯಕತ್ವ ಗುಣ ಹೊಂದಿದವರಾಗಿದ್ದು, ಶಿಕ್ಷಿತರಾಗುವ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳಬೇಕಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು.

ಜನಜಾಗೃತಿ ಸಮಾವೇಶ

ತಾಲೂಕಿನ ಹಿರೇಮನ್ನಾಪುರದ ವಾಲ್ಮೀಕಿ ಗುರುಕುಲಾಶ್ರಮ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ವಾಲ್ಮೀಕಿ ಜನಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಎಂಬ ಸಮುದಾಯದ ಬಹುದಿನದ ಬೇಡಿಕೆ ಈಡೇರಿಸಲು ಹಿಂದಿನ ಸರ್ಕಾರ ನಿರ್ಧರಿಸಿತ್ತು. ಈಗಿನ ಸರ್ಕಾರ ಸ್ಪಂದಿಸುತ್ತಿಲ್ಲ. ಹೋರಾಟದ ಮೂಲಕವೇ ಬೇಡಿಕೆ ಈಡೇರಿಸಿಕೊಳ್ಳಬೇಕಿದೆ. ಸದ್ಯ ಆಯೋಜಿಸಿರುವ ಜಾಗೃತಿ ಸಮಾವೇಶ ಹೋರಾಟಕ್ಕೆ ಮುನ್ನುಡಿ ಬರೆಯಬೇಕಿದೆ ಎಂದರು.

ಸಮುದಾಯದ ಹೋರಾಟಗಾರ ಭಾಸ್ಕರ ಪ್ರಸಾದ್ ಮಾತನಾಡಿ, ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಲು ಪ್ರಯತ್ನಗಳು ನಡೆದಿವೆ. ಹಾಗೇನಾದರೂ ಸೇರಿಸಿದರೆ ವಾಲ್ಮೀಕಿ ಸಮುದಾಯಕ್ಕೆ ರಾಜಕೀಯ ಅಸ್ತಿತ್ವವೇ ಇಲ್ಲದಂತಾಗುತ್ತದೆ. ಮೀಸಲಾತಿ ಪ್ರಮಾಣ ಹೆಚ್ಚಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಸ್ಪಷ್ಟನೆ ನೀಡಬೇಕಿದೆ ಎಂದರು.

ಸಮುದಾಯದ ಅಧ್ಯಕ್ಷ ಚಳವಳಿ ರಾಜಣ್ಣ ಮಾತನಾಡಿ, ಸಮುದಾಯದ ಎಲ್ಲರೂ ಶಿಕ್ಷಿತರಾಗಿ ಆರ್ಥಿಕವಾಗಿ ಸಬಲರಾಗಬೇಕಿದೆ ಎಂದರು. ವಾಲ್ಮೀಕಿ ಗುರುಕುಲಾಶ್ರಮದ ಪವನಕುಮಾರ್, ಪ್ರಮುಖರಾದ ಜಿಗಣಿ ಶಂಕರ, ಕಂಪ್ಲಿ ರಾಜಣ್ಣ, ಶಿವರಾಜ, ರಮಾ ನಾಗೇಶ, ವೆಂಕೋಬ ನಾಯಕ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net