ಪೊಲೀಸ್ ಕಾವಲಿನಲ್ಲಿ ಸ್ಟ್ರಾಂಗ್ ರೂಮ್

23 hkr 02
Published on

ಹಾವೇರಿ: ಜಿಲ್ಲೆಯ ನಾಲ್ಕು ತಾಲೂಕುಗಳ ಗ್ರಾಪಂಗಳಿಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಅವುಗಳನ್ನು ಆಯಾ ತಾಲೂಕಿನ ಡಿ-ಮಸ್ಟರಿಂಗ್ ಕೇಂದ್ರದ ಸ್ಟ್ರಾಂಗ್ ರೂಮ್ಳಲ್ಲಿರಿಸಿ ಬಿಗಿಬಂದೋಬಸ್ತ್ ಕಲ್ಪಿಸಲಾಗಿದೆ.

ಮತ ಎಣಿಕೆ ದಿನಾಂಕದವರೆಗೆ ಸ್ಟ್ರಾಂಗ್ ರೂಮ್ಳಿಗೆ 24*7 ಪೊಲೀಸ್ ಭದ್ರತೆ ಒದಗಿಸಲಾಗಿದೆ. ಇಬ್ಬರು ಸಿಪಿಐ, ಐವರು ಪೊಲೀಸ್ ಪೇದೆಗಳು, 2 ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಇಬ್ಬರು ಎಎಸ್​ಐ ದರ್ಜೆ ಅಧಿಕಾರಿಗಳು ಕಾವಲು ಇದ್ದಾರೆ.

ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಮತದಾನ ನಡೆದ ಹಾವೇರಿ, ರಾಣೆಬೆನ್ನೂರ, ಹಿರೇಕೆರೂರ ಹಾಗೂ ರಟ್ಟಿಹಳ್ಳಿ ತಾಲೂಕುಗಳಲ್ಲಿ ಶೇ. 84.03ರಷ್ಟು ಮತದಾರರು 3,585 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಿದ್ದಾರೆ. ಇದರಲ್ಲಿ 1,357 ಅಭ್ಯರ್ಥಿಗಳು ಆಯ್ಕೆಯಾಗಲಿದ್ದಾರೆ.

ಎಲ್ಲೆಲ್ಲಿ ಸ್ಟ್ರಾಂಗ್ ರೂಮ್ಳು?: ಹಾವೇರಿ ಶಿವಲಿಂಗೇಶ್ವರ ಮಹಿಳಾ ಕಾಲೇಜ್, ರಾಣೆಬೆನ್ನೂರನ ರೋಟರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಹಿರೇಕೆರೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್, ರಟ್ಟಿಹಳ್ಳಿಯ ತಾವರಗಿ ರಸ್ತೆಯ ತರಳಬಾಳು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಟ್ರಾಂಗ್ ರೂಮ್ಳನ್ನು ಸ್ಥಾಪಿಸಿ ಡಿ. 30ರವರೆಗೆ ಭದ್ರತೆ ಒದಗಿಸಲಾಗಿದೆ.

ಸ್ಟ್ರಾಂಗ್ ರೂಮ್ಳಿರುವ ಶಾಲೆ ಕಟ್ಟಡಗಳಲ್ಲಿ ಡಿ. 30ರಂದು ಬೆಳಗ್ಗೆ 6ರಿಂದ ಮತ ಎಣಿಕೆ ನಡೆಯಲಿದೆ. ಈ ಕಾರ್ಯ ಮುಗಿಯುವರೆಗೆ ಮತ ಎಣಿಕೆ ಕೇಂದ್ರ ಸುತ್ತಲಿನ 100 ಮೀಟರ್ ಪ್ರದೇಶದಲ್ಲಿ ನಾಲ್ವರಿಗಿಂತ ಹೆಚ್ಚು ಜನರು ಗುಂಪಾಗಿ ಸಂಚಾರ, ಮಾರಕಾಸ್ತ್ರ ಹಿಡಿದುಕೊಂಡು ಓಡಾಡುವುದು, ಜೀವಂತ ವ್ಯಕ್ತಿ ಅಥವಾ ಮೃತ ವ್ಯಕ್ತಿ ಭಿತ್ತಿಚಿತ್ರಗಳ ಪ್ರದರ್ಶನ, ಸಭೆ-ಸಮಾರಂಭ ನಡೆಸುವುದನ್ನು ನಿಷೇಧಿಸಲಾಗಿದೆ. ಈ ಆದೇಶ ಶವ ಸಂಸ್ಕಾರ, ಮದುವೆ, ಧಾರ್ವಿುಕ ಕಾರ್ಯಕ್ರಮಗಳಿಗೆ ಅನ್ವಯಿಸುವುದಿಲ್ಲ.

ಹಾವೇರಿ ಸ್ಟ್ರಾಂಗ್ ರೂಮ್ೆ ಅಭದ್ರತೆಯ ಆತಂಕ: ಹಾವೇರಿ ಶಿವಲಿಂಗೇಶ್ವರ ಮಹಿಳಾ ಕಾಲೇಜ್ ಕಟ್ಟಡದ ಮೊದಲ ಮಹಡಿಯಲ್ಲಿನ ಸ್ಟ್ರಾಂಗ್ ರೂಮ್ೆ ಪೊಲೀಸ್ ಭದ್ರತೆ ನೀಡಲಾಗಿದೆ. ಸ್ಟ್ರಾಂಗ್ ರೂಮ್ ಪ್ರದೇಶದ 100 ಮೀಟರ್ ವ್ಯಾಪ್ತಿಯಲ್ಲಿ ಯಾರ ಪ್ರವೇಶಕ್ಕೂ ಅವಕಾಶವಿಲ್ಲ. ಆದರೆ, ಇದರ ಪಕ್ಕದ ಕೋಣೆಯನ್ನು ಬುಧವಾರ ತೆರೆಯಲಾಗಿತ್ತು ಎನ್ನಲಾಗಿದೆ. ಕಾಲೇಜ್ ವಿದ್ಯಾರ್ಥಿನಿಯರು, ಶಿಕ್ಷಕರು ಈ ರೂಮ್ಲ್ಲಿದ್ದರು ಎಂದೂ ಹೇಳಲಾಗುತ್ತಿದೆ. ಇವರ ಓಡಾಟಕ್ಕೆ ಪೊಲೀಸರು ಅವಕಾಶ ಕಲ್ಪಿಸಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಅಲ್ಲದೆ, ಸ್ಟ್ರಾಂಗ್ ರೂಮ್ ಭದ್ರತೆ ಬಗ್ಗೆ ಕೆಲವು ಅಭ್ಯರ್ಥಿಗಳಲ್ಲಿ ಆತಂಕವೂ ಮೂಡಿದೆ.

ಸ್ಟ್ರಾಂಗ್ ರೂಮ್ೆ ವಿಶೇಷ ಭದ್ರತೆ ಒದಗಿಸಲಾಗಿದೆ. ಪಕ್ಕದ ಕೊಠಡಿಯನ್ನು ಮತ ಎಣಿಕೆಗೆ ಬಳಸಿಕೊಳ್ಳಲಾಗುತ್ತಿದೆ. ಆ ಕೊಠಡಿಯಲ್ಲಿ ಶಿಕ್ಷಕರು, ವಿದ್ಯಾರ್ಥಿಗಳಿದ್ದ ಬಗ್ಗೆ ಮಾಹಿತಿಯಿಲ್ಲ. ಕೂಡಲೆ ಭದ್ರತೆ ಅಧಿಕಾರಿಗಳೊಂದಿಗೆ ರ್ಚಚಿಸುತ್ತೇನೆ.

| ಶಂಕರ ಜಿ.ಎಸ್., ಹಾವೇರಿ ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net