

ಕಂಪ್ಲಿ: ಮಕ್ಕಳ ಗುಣಾತ್ಮಕ ಶಿಕ್ಷಣಕ್ಕಾಗಿ ಆರ್ಥಿಕ ಹೃದಯವೈಶಾಲ್ಯವುಳ್ಳವರು ಸರ್ಕಾರಿ ಶಾಲೆಗಳನ್ನು ದತ್ತುಪಡೆದು ಅಭಿವೃದ್ಧಿಗೊಳಿಸಬೇಕು ಎಂದು ಹೊಸಪೇಟೆ ಬಿಇಒ ಚನ್ನಬಸಪ್ಪ ಮಗ್ಗದ ಹೇಳಿದರು.
ತಾಲೂಕಿನ ದೇವಸಮುದ್ರ ಸಹಿಪ್ರಾ ಶಾಲೆಯ ಎಸ್‌ಡಿಎಂಸಿ ಸಮಿತಿಯವರು ದಾನಿಗಳ ಸಹಾಯದಿಂದ ಶಾಲೆಗೆ ಮೂಲಸೌಕರ್ಯ ಒದಗಿಸಿದ್ದದಕ್ಕಾಗಿ, ಉತ್ತಮ ಶಾಲೆ ಪ್ರಶಸ್ತಿಗಳಿಸಿದ್ದಕ್ಕಾಗಿ ಗುರುವಾರ ಶಾಲೆಗೆ ಭೇಟಿನೀಡಿದ ಸಂದರ್ಭದಲ್ಲಿ ಮಾತನಾಡಿದರು.
ಇದನ್ನೂ ಓದಿ: ಸರ್ಕಾರಿ ಶಾಲೆಗಳಿಗೆ ಪೀಠೋಪಕರಣ ವಿತರಣೆ
ಸರ್ಕಾರದ ಅನುದಾನಕ್ಕಾಗಿ ಕಾಯದೆ ಮಕ್ಕಳ ಗುಣಾತ್ಮಕ ಶಿಕ್ಷಣಕ್ಕಾಗಿ ಶಾಲೆಗೆ ಮೂಲಸೌಕರ್ಯಗಳನ್ನು ಒದಗಿಸಲು ಮುಂದಾಗಬೇಕು. ದೇವಸಮುದ್ರ ಸಹಿಪ್ರಾ ಶಾಲಾಭಿವೃದ್ಧಿ ತಾಲೂಕಿನ ಶಿಕ್ಷಕರಿಗೆ ಪ್ರೇರಣೆಯಾಗಬೇಕಿದೆ ಎಂದರು.
ಶಾಲಾ ಗ್ರಂಥಾಲಯ ಉದ್ಘಾಟಿಸಿದರು. ದಾನಿಗಳ ಸಹಾಯದಿಂದ ಸುಣ್ಣಬಣ್ಣ, ಕೈತೊಳೆಯುವ ನೀರಿನ ವ್ಯವಸ್ಥೆ, ಶುದ್ಧ ಕುಡಿವ ನೀರು ಪೂರೈಕೆ ವ್ಯವಸ್ಥೆ ಒದಗಿಸಲು ಮುಂದಾದ ಎಸ್‌ಡಿಎಂಸಿ ಅಧ್ಯಕ್ಷ ವಿ.ವೆಂಕಟೇಶ ಅವರನ್ನು ಗೌರವಿಸಲಾಯಿತು.
ಚಿಕ್ಕಜಾಯಿಗನೂರು ಸರ್ಕಾರಿ ಪ್ರೌಢಶಾಲೆಗೆ ದಿಢೀರ್ ಭೇಟಿ ನೀಡಿದಾಗ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ಹೆಚ್ಚುವರಿ ವಿಶೇಷ ತರಗತಿ ನಡೆಸುವುದನ್ನು, ಸಂವಾದ, ಗುಂಪು ಚರ್ಚೆ, ಕಂಠಪಾಠ ಸೇರಿ ಶೈಕ್ಷಣಿಕ ಚಟುವಟಿಕೆಗಳನ್ನು ವೀಕ್ಷಿಸಿ ಶ್ಲಾಘಿಸಿದರು.
ಕಂಪ್ಲಿಯ 8ನೇವಾರ್ಡ್ ಸಹಿಪ್ರಾ ಶಾಲೆಗೆ ಭೇಟಿ ನೀಡಿ ಶಾಲಾ ದಾಖಲಾತಿ, ಮಕ್ಕಳ ಹಾಜರಾತಿ, ಮಕ್ಕಳ ಗುಣಮಟ್ಟ ಮೊದಲಾದವುಗಳನ್ನು ಪರಿಶೀಲಿಸಿದರು. ಮುಖ್ಯಶಿಕ್ಷಕ ಎಚ್.ದೊಡ್ಡಬಸಪ್ಪ, ಗ್ರಾಮದ ಮುಖಂಡ ಸೂಗುರು ಶೇಖರಪ್ಪ, ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತಪ್ಪ, ಸಿಆರ್‌ಪಿಗಳಾದ ವೀರೇಶ, ಹನುಮಂತಪ್ಪ, ಭೂಮೇಶ್ವರ, ರೇಣುಕಾರಾಧ್ಯ ಇತರರಿದ್ದರು.
07ಕೆಎಂಪಿ02