ಸಂಚಾರ ನಿಯಂತ್ರಣಕ್ಕೆ ಪೊಲೀಸರ ಕಟ್ಟುನಿಟ್ಟು

30 lxr 2 TRAFIC POLICE
Published on

ಲಕ್ಷ್ಮೇಶ್ವರ: ಪಟ್ಟಣದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆ ನಿಯಂತ್ರಣಕ್ಕಾಗಿ ಶುಕ್ರವಾರ ಪಿಎಸ್‌ಐ ಯುಸೂಫ್ ಜಮುಲಾ ಅವರ ನೇತೃತ್ವದಲ್ಲಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಜರುಗಿಸಿದರು.


ಮುಖ್ಯ ಬಜಾರ್ ರಸ್ತೆಯಲ್ಲಿ ಎಲ್ಲೆಂದರಲ್ಲಿ ನಿಲ್ಲಿಸುತ್ತಿದ್ದ ಬೈಕ್‌ಗಳನ್ನು ಒಂದು ಬದಿ ನಿಲ್ಲಿಸುವ ಕ್ರಮ ಕೈಗೊಂಡರು.

ಸೋಮೇಶ್ವರ ಪಾದಗಟ್ಟಿ, ಶಿಗ್ಲಿ ನಾಕಾ, ಬಸ್ ನಿಲ್ದಾಣ, ಹಾವಳಿ ಆಂಜನೇಯ ದೇವಸ್ಥಾನ, ಪಂಪವೃತ್ತ ಸೇರಿ ಜನನಿಬಿಡ ಪ್ರದೇಶದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಟ್ರಾಫಿಕ್ ಸಮಸ್ಯೆ ನಿಯಂತ್ರಣಕ್ಕೆ ಕ್ರಮ ಕೈಗೊಂಡರು. ಎಲ್ಲೆಂದರಲ್ಲಿ ಬೈಕ್ ನಿಲ್ಲಿಸಿದವರಿಗೆ ದಂಡ ಹಾಕಿ ಎಚ್ಚರಿಕೆ ನೀಡಲಾಯಿತು.


‘ಲಕ್ಷ್ಮೇಶ್ವರದಲ್ಲಿ ವಾಹನ ದಟ್ಟಣೆ ಸಂಚಾರಕ್ಕೆ ಅಡಚಣೆ‘ ಕುರಿತು ಶುಕ್ರವಾರವಷ್ಟೇ ಅಯ್ಯೋ ಪ್ರಾಬ್ಲಂ ಕಣ್ರೀ… ಕಾಲಂನಲ್ಲಿ ವರದಿ ಪ್ರಕಟಿಸಲಾಗಿತ್ತು. ವರದಿ ಹಿನ್ನೆಲೆ ಪೊಲೀಸರು ಟ್ರಾಫಿಕ್ ನಿಯಂತ್ರಣಕ್ಕೆ ಕ್ರಮಕೈಗೊಂಡರು.


ಮುಖ್ಯ ಬಜಾರ್ ರಸ್ತೆಯಲ್ಲಿ ಒನ್‌ವೇ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದರು.

ಈ ಕುರಿತು ಸಿಪಿಐ ವಿಕಾಸ ಲಮಾಣಿ ಅವರು ಪ್ರತಿಕ್ರಿಯಿಸಿ ಮುಖ್ಯ ಬಜಾರ್ ರಸ್ತೆ ಕಾಮಗಾರಿಯಿಂದ ಟ್ರಾಫಿಕ್ ನಿಯಂತ್ರಣಕ್ಕೆ ಅಡ್ಡಿಯಾಗಿದೆ. ಬೆಳೆಯುತ್ತಿರುವ ಪಟ್ಟಣದಲ್ಲಿನ ಟ್ರಾಫಿಕ್ ನಿಯಂತ್ರಣಕ್ಕೆ ಪುರಸಭೆ ಮತ್ತು ವ್ಯಾಪಾರಸ್ಥರ ಸಹಕಾರ ಬೇಕಾಗುತ್ತದೆ. ಆದಾಗ್ಯೂ ಮುಖ್ಯ ಬಜಾರ್ ರಸ್ತೆಯಲ್ಲಿ ಸಂಚಾರದಟ್ಟಣೆ ನಿಯಂತ್ರಣಕ್ಕೆ ನಿತ್ಯವೂ ಸಿಬ್ಬಂದಿ ನಿಯೋಜಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net