

ಕವಿತಾಳ: ಪ್ರಸ್ತುತ ಒತ್ತಡದ ಬದುಕಿನಲ್ಲಿ ನೆಮ್ಮದಿ ಮರೀಚಿಕೆಯಾಗಿದ್ದು, ಯೋಗ-ಧ್ಯಾನ ಮೈಗೂಡಿಸಿಕೊಳ್ಳಬೇಕು ಎಂದು ಆಂಧ್ರಪ್ರದೇಶದ ಓಂ ಶಕ್ತಿ ಪಿರಾಮಿಡ್ ಧ್ಯಾನ ಮಂದಿರದ ಮುಖ್ಯಸ್ಥೆ ಸಾವಿತ್ರಿ ಚಂದ್ರರೆಡ್ಡಿ ಹೇಳಿದರು.
ಇದನ್ನೂ ಓದಿ: ಧ್ಯಾನ, ಸಾಧನೆ, ಸೇವೆಯ ಅವಕಾಶವೇ ಮಹಾಕುಂಭ
ಸಮೀಪದ ಲಕ್ಷ್ಮೀಕ್ಯಾಂಪ್‌ನಲ್ಲಿ ಓಂ ಶಕ್ತಿ ಪಿರಾಮಿಡ್ ಧ್ಯಾನ ಮಂದಿರವನ್ನು ಉದ್ಘಾಟಿಸಿ ಮಾತನಾಡಿದರು. ಆಧುನಿಕ ಯುಗದಲ್ಲಿ ಕೆಲಸದ ಒತ್ತಡದಿಂದ ಮನುಷ್ಯ ಮಾನಸಿಕ ನೆಮ್ಮದಿ ಕಳೆದುಕೊಳ್ಳುವ ಮುಖಾಂತರ ಅನೇಕ ರೋಗಗಳಿಗೆ ಗುರಿಯಾಗುತ್ತಿದ್ದಾನೆ. ರೋಗಮುಕ್ತ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಪ್ರತಿಯೊಬ್ಬರೂ ನಿತ್ಯ ಜೀವನದಲ್ಲಿ ಧ್ಯಾನ, ಯೋಗ ರೂಢಿಸಿಕೊಳ್ಳಬೇಕು ಎಂದರು.
ಕರ್ನಾಟಕ ಓಂ ಶಕ್ತಿ ಪಿರಾಮಿಡ್ ಧ್ಯಾನ ಮಂದಿರ ಮುಖ್ಯಸ್ಥ ಪಿ.ವೆಂಕಟೇಶ ಕುಲ್ಕರ್ಣಿ ಮಾತನಾಡಿ, ಜನರ ಹಿತದೃಷ್ಟಿಯಿಂದ ರಾಜ್ಯಾದ್ಯಂತ ಧ್ಯಾನ ಮಂದಿರಗಳನ್ನು ಸ್ಥಾಪಿಸಲಾಗುತ್ತಿದೆ. ಅದರಂತೆ ಲಕ್ಷ್ಮೀಕ್ಯಾಂಪ್‌ನಲ್ಲಿ ನಿರ್ಮಿಸಿದ್ದು, ಸಾರ್ವಜನಿಕರು ಸದ್ಬಳಕೆ ಪಡೆದುಕೊಳ್ಳಬೇಕು ಎಂದರು. ಡಾ.ಅಭಿನವ ಬ್ರಹ್ಮಾನಂದ ಶ್ರೀ ಪರಮಾನಂದವಾಡಿ, ಮಹಾಂತ ಶ್ರೀ ಕರೇಗುಡ್ಡ, ಧ್ಯಾನ ಗುರು ಕೇತಪ್ಪ, ಪ್ರಮುಖರಾದ ಗೋವಿಂದಯ್ಯ ಶೆಟ್ಟಿ, ರಾಘವೇಂದ್ರ ಸಿರಗುಪ್ಪ, ಅಮರೇಶ ದೇಸಾಯಿ ಇತರರಿದ್ದರು.