

ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಡಬ ತಾಲೂಕು, ಮಹಿಳಾ ಜ್ಞಾನ ವಿಕಾಸ ಕೇಂದ್ರ ವತಿಯಿಂದ ಸವ್ಯಸಾಕ್ಷಿ ಕಲಾ ತಂಡ ಪಂಜ ಹಾಗೂ ಮಹಾಮಾಯೇ ಕಲಾ ತಂಡ ಎನೆಕಲ್ಲು ಸದಸ್ಯರಿಂದ ಸಾಮಾಜಿಕ ಜಾಲತಾಣ ಹಾಗೂ ಮೊಬೈಲ್ ಬಳಕೆ ದುಷ್ಪರಿಣಾಮ, ಸಂಚಾರಿ ನಿಯಮ ಉಲ್ಲಂಘನೆಯಿಂದಾಗುವ ಅನಾಹುತ ಹಾಗೂ ಪರಿಸರ ಜಾಗೃತಿ ವಿಚಾರಗಳ ಬಗ್ಗೆ ಅರಿವು ಮೂಡಿಸುವ ಬೀದಿ ನಾಟಕ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆ ಕಲಾಮಂದಿರದಲ್ಲಿ ನಡೆಯಿತು.
ಶ್ರೀ ಸುಬ್ರಹ್ಮಣ್ಯ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಕೃಷ್ಣ ಶರ್ಮ ಉದ್ಘಾಟಿಸಿದರು. ಬಿಳಿನೆಲೆ ಒಕ್ಕೂಟ ಅಧ್ಯಕ್ಷ ರಾಜೇಶ್ ಒ.ಎಸ್. ಅಧ್ಯಕ್ಷತೆ ವಹಿಸಿದರು. ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆ ಮುಖ್ಯಶಿಕ್ಷಕ ಸತ್ಯಶಂಕರ ಭಟ್, ಬಿಳಿನೆಲೆ ಜನಜಾಗೃತಿ ವೇದಿಕೆ ಸದಸ್ಯ ಗೋಪಾಲಕೃಷ್ಣ ಭಟ್, ಬಿಳಿನೆಲೆ ವೇದವ್ಯಾಸ ವಿದ್ಯಾಲಯದ ಮುಖ್ಯಶಿಕ್ಷಕ ಪ್ರಶಾಂತ್ ಬಿ., ಬಿಳಿನೆಲೆ ಜ್ಞಾನದೀಪ ಜ್ಞಾನ ವಿಕಾಸ ಕೇಂದ್ರದ ಸಂಯೋಜಕಿ ಉಷಾ ಉಪಸ್ಥಿತರಿದ್ದರು.
ಕಡಬ ತಾಲೂಕಿನ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಚೇತನಾ ಪ್ರಸ್ತಾಪಿಸಿ, ಸ್ವಾಗತಿಸಿದರು. ಬಿಳಿನೆಲೆ ಪ್ರೌಢಶಾಲೆ ಶಿಕ್ಷಕ ದಿನೇಶ್ ಕುಂದರ್ ವಂದಿಸಿದರು. ಬಿಳಿನೆಲೆ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಸತೀಶ ಎ.ನಿರೂಪಿಸಿದರು.