ಒಂದನೇ ತರಗತಿ ಬಾಲಕಿಯ ತಲೆಗೇ ಕಚ್ಚಿದ ಬೀದಿನಾಯಿಗಳು; ಗಾಯಾಳುವಿಗೆ 20ಕ್ಕೂ ಅಧಿಕ ಹೊಲಿಗೆ..

Stray Dog
Published on

ಉಡುಪಿ: ಬೀದಿನಾಯಿಗಳು ಒಂದನೇ ತರಗತಿಯ ಬಾಲಕಿಯ ಮೇಲೆ ತೀವ್ರ ದಾಳಿ ನಡೆಸಿದ್ದು, ಅವುಗಳು ಬಾಲಕಿಯ ತಲೆಗೇ ಕಚ್ಚಿರುವುದರಿಂದ ಆಕೆ ಗಂಭೀರವಾಗಿ ಗಾಯಗೊಂಡಿದ್ದಾಳೆ. ಉಡುಪಿ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.

ಉಡುಪಿಯ ಮಣಿಪಾಲ್ ಅಕಾಡೆಮಿ ಸ್ಕೂಲ್​ನ ಒಂದನೇ ತರಗತಿಯ ಬಾಲಕಿಯೊಬ್ಬಳ ಮೇಲೆ ಐದಾರು ಬೀದಿನಾಯಿಗಳು ದಾಳಿ ನಡೆಸಿವೆ. ಮಗುವಿನ ತಲೆಗೆ ಗಂಭೀರ ಗಾಯವಾಗಿದ್ದು, ಆಕೆಯನ್ನು ಅಜ್ಜರಕಾಡಿನ ಆಸ್ಪತ್ರೆಗೆ ದಾಖಲಿಸಿದ್ದು, ಸುಮಾರು ಇಪ್ಪತ್ತು ಹೊಲಿಗೆಗಳನ್ನು ಹಾಕಲಾಗಿದೆ.

ಹಿರಿಯ ನ್ಯಾಯಾಧೀಶರಾದ ಶರ್ಮಿಳಾ ಅವರು ಆಸ್ಪತ್ರೆಗೆ ಭೇಟಿ ನೀಡಿ ಮಗುವಿನ ಕ್ಷೇಮದ ಕುರಿತು ವಿಚಾರಿಸಿದ್ದಾರೆ. ಉಡುಪಿಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಣಿಪಾಲ, ಇಂದ್ರಾಳಿ, ಸಿಟಿ ಬಸ್ ನಿಲ್ದಾಣ, ಅಜ್ಜರಕಾಡು, ಬೀಡಿನಗುಡ್ಡೆ ಪರಿಸರದಲ್ಲಿನ ಬೀದಿನಾಯಿಗಳ ಕಾಟ ನಿಯಂತ್ರಿಸುವಂತೆ ಜಿಲ್ಲಾ ನಾಗರಿಕರ ವೇದಿಕೆ ನಗರಸಭೆಗೆ ಮನವಿ ಮಾಡಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net