ಪಬ್‌ಜಿ ಚಾಲೆಂಜ್: ವಿಕಾರವಾಗಿ ತಲೆಗೂದಲು ಕತ್ತರಿಸಿಕೊಂಡ ವಿದ್ಯಾರ್ಥಿ!

pubji
Published on

ಉಪ್ಪಿನಂಗಡಿ (ದ.ಕ.): ಪಬ್‌ಜಿ ಆಟದ ಸಂಬಂಧ ಉಳ್ಳಾಲದಲ್ಲಿ ಬಾಲಕನೊಬ್ಬ ಪ್ರಾಣ ಕಳೆದುಕೊಂಡ ಎರಡು ದಿನಗಳ ನಂತರ, ಉಪ್ಪಿನಂಗಡಿಯ ಖಾಸಗಿ ಪ್ರೌಢಶಾಲಾ ವಿದ್ಯಾರ್ಥಿಯೊಬ್ಬ ಪಬ್ ಜಿ ಆಟದ ಸವಾಲಿನಲ್ಲಿ ತಲೆಕೂದಲನ್ನು ವಿಚಿತ್ರವಾಗಿ ಕತ್ತರಿಸಿಕೊಂಡಿದ್ದಾನೆ!

9ನೇ ತರಗತಿಯ ವಿದ್ಯಾರ್ಥಿ ತಲೆಕೂದಲನ್ನು ವಿಕಾರವಾಗಿ ಕತ್ತರಿಸಿರುವುದನ್ನು ಗಮನಿಸಿದ ಪಾಲಕರು ಆತನನ್ನು ಪ್ರಶ್ನಿಸಿದ್ದಾರೆ. ಮೊದಲು ಸುಳ್ಳು ಕತೆ ಹೆಣೆಯಲು ಪ್ರಯತ್ನಿಸಿದ ಬಾಲಕ, ಮತ್ತಷ್ಟು ವಿಚಾರಿಸಿದಾಗ ಪಬ್‌ಜಿ ಆಟದಲ್ಲಿ ಮಗ್ನನಾಗಿ ಮೊಬೈಲ್ ಮುಂದೆ ಕುಳಿತು ತಲೆ ಕೂದಲು ತೆಗೆದುಕೊಂಡದ್ದಾಗಿ ತಿಳಿಸಿದ್ದಾನೆ.

ಘಟನೆಯನ್ನು ಮನೆಯವರು ಪೊಲೀಸರ ಗಮನಕ್ಕೆ ತಂದಾಗ ಈ ಆಟದಲ್ಲಿ ಇನ್ನಷ್ಟು ಮಕ್ಕಳು ಭಾಗಿಯಾಗಿರುವುದು ಪತ್ತೆಯಾಗಿದೆ. ಎಲ್ಲ ವಿದ್ಯಾರ್ಥಿಗಳಿಂದ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ನಡುವೆ ವಿದ್ಯಾರ್ಥಿಯ ಪಾಲಕರೊಬ್ಬರು ಇಂತಹ ಹುಚ್ಚಾಟಕ್ಕೆ ಆನ್‌ಲೈನ್ ಶಿಕ್ಷಣಕ್ಕಾಗಿ ನೀಡುವ ಮೊಬೈಲ್ ಫೋನ್‌ಗಳೇ ಕಾರಣವೆಂದು ಪೊಲೀಸರ ಮುಂದೆ ದೂರಿದ್ದಾರೆ. ಮಕ್ಕಳಿಗೆ ಕರೊನಾ ವೈರಸ್ ತಗುಲಿದರೂ ಚಿಂತೆ ಇಲ್ಲ, ದಯವಿಟ್ಟು ಶಾಲೆಯಲ್ಲೇ ಶಿಕ್ಷಣ ಕೊಡಿಸಿ. ಆನ್‌ಲೈನ್ ಶಿಕ್ಷಣ ನೆಪದಲ್ಲಿ ಮಕ್ಕಳು ಮೊಬೈಲ್‌ನಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದಾರೆ ಎಂದು ಮನವಿ ಮಾಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net