ಹಾರೋಹಳ್ಳಿಯಲ್ಲಿ ಅಂಗಡಿ ಮಳಿಗೆ ತೆರವು

IMG-20250202-WA0319
Published on

ಹಾರೋಹಳ್ಳಿ : ತಾಲೂಕಿನ ಮರಳವಾಡಿ ಹೋಬಳಿಯ ಯಡವನಹಳ್ಳಿ ಬಳಿ ಜೈನ್ ಯುನಿವರ್ಸಿಟಿ ಮುಂಭಾಗದಲ್ಲಿದ್ದ ಅಕ್ರಮವಾಗಿ ಕಟ್ಟಿಕೊಂಡಿದ್ದ ಅಂಗಡಿ ಮಳಿಗೆಗಳನ್ನು ತಹಸೀಲ್ದಾರ್ ಆರ್.ಸಿ. ಶಿವಕುಮಾರ್ ನೇತೃತ್ವದ ತಂಡ ನೆಲಸಮಗೊಳಿಸಿದರು.

ಚೀಲೂರು ಗ್ರಾಮದ ಸರ್ಕಾರಿ ಸ.ನಂ 194ರಲ್ಲಿ ಸರ್ಕಾರಿ ಗುಂಡು ತೋಪಿನಲ್ಲಿ ಕಳೆದ 30 ವರ್ಷಗಳ ಹಿಂದಿನಿಂದ ಅಕ್ರಮವಾಗಿ ಅಂಗಡಿ ಮಳಿಗೆಗಳನ್ನು ಕಟ್ಟಿಕೊಂಡು ವ್ಯಾಪಾರ ಮಾಡುತ್ತಿದ್ದರು. ಗುಂಡು ತೋಪಿನಲ್ಲಿ ಅಕ್ರಮವಾಗಿ ಅಂಗಡಿಗಳನ್ನು ನಿರ್ಮಿಸಿಕೊಂಡಿದ್ದರು. ಇದನ್ನು ತೆರವುಗೊಳಿಸುವಂತೆ ಯಡವನಳ್ಳಿ ಗ್ರಾಮಸ್ಥರು ಜಿಲ್ಲಾಧಿಕಾರಿ ಹಾಗೂ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.

ತಹಸೀಲ್ದಾರ್ ಶಿವಕುಮಾರ್ ಅವರ ದಾಖಲೆಗಳನ್ನು ಪರಿಶೀಲಿಸಿ ಅಂಗಡಿ ತೆರವಿಗೆ ತಿಳಿಸಲಾಗಿತ್ತು. ಅದರಂತೆ ಶನಿವಾರ ಅಂಗಡಿ ಮಳಿಗೆಗಳನ್ನು ಜೆಸಿಪಿ ಯಂತ್ರದಿಂದ ನೆಲಸಮಗೊಳಿಸಲಾಯಿತು. ಕಂದಾಯ ರಾಜಸ್ವ ನಿರೀಕ್ಷಕ ಭರತ್, ಗ್ರಾಮ ಆಡಳಿತ ಅಧಿಕಾರಿಗಳಾದ ಮಂಜುಕುಮಾರ್, ರವಿಕುಮಾರ್, ನಾಗರಾಜು, ಗ್ರಾಮ ಸಹಾಯಕರು, ಚೀಲೂರು ಗ್ರಾಪಂ ಅಧಿಕಾರಿಗಳು ಹಾಗೂ ಹಾರೋಹಳ್ಳಿ ಪೊಲೀಸರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net