ವಂದೇ ಭಾರತ್​ ರೈಲಿಗೆ ಕಲ್ಲು ತೂರಾಟ

vande bharath
Published on

ಕಾಸರಗೋಡು: ತಿರುವನಂತಪುರಕ್ಕೆ ಸಂಚರಿಸುತ್ತಿದ್ದ ವಂದೇ ಭಾರತ್​ ರೈಲಿಗೆ ಬೇಕಲದಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಪರಿಣಾಮ ರೈಲಿನ ಬೋಗಿಯ ಗಾಜಿಗೆ ಹಾನಿಯುಂಟಾಗಿದೆ.

ಗುರುವಾರ ಕಾಸರಗೋಡಿನಿಂದ ತಿರುವನಂತಪುರಕ್ಕೆ ರೈಲು ಹೋಗುತ್ತಿರುವಾಗ ಬೇಕಲ ಮತ್ತು ಕಾಞಂಗಾಡಿನ ಮಧ್ಯೆ ರೈಲಿಗೆ ಕಲ್ಲು ತೂರಲಾಗಿದೆ. ರೈಲ್ವೆ ಟಿಟಿಇ ಕಂಟ್ರೋಲ್​ ರೂಮ್​ನಿಂದ ಲಭಿಸಿದ ಮಾಹಿತಿಯನ್ವಯ ಕಾಸರಗೋಡು ರೈಲ್ವೆ ಠಾಣೆ ಎಸ್​.ಐ. ರೆಜಿಕುಮಾರ್​ ಹಾಗೂ ರೈಲ್ವೆ ಭದ್ರತಾ ಪಡೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಸ್ಥಳದಲ್ಲಿರುವ ಸಿಸಿ ಕ್ಯಾಮರಾ ದೃಶ್ಯಾವಳಿಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net