ಚರಂಡಿಯಲ್ಲಿ ಹೂತು ಹೋದ ಟೆಂಪೋ

Mul_Tempo
Published on

ಮೂಲ್ಕಿ: ನಗರ ಪಂಚಾಯಿತಿಯ ಒಳ ರಸ್ತೆಯ ಪಂಚಮಹಲ್​ ರಸ್ತೆಯ ಪುಂಡಲಿಕ ಕಾಮತ್​ ಅಂಗಡಿಯ ತಿರುವಿನಲ್ಲಿ 407 ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಯಲ್ಲಿ ಹೂತು ಹೋಗಿದ್ದು, 2 ಗಂಟೆಗೂ ಅಧಿಕ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು.

ವೆಂಕಟರಮಣ ದೇವಸ್ಥಾನದ ಕಡೆಯಿಂದ ಮೂಲ್ಕಿ ಕೆ.ಎಸ್​.ರಾವ್​ ನಗರದ ಕಡೆ ಕೂಲಿ ಕಾರ್ಮಿಕರನ್ನು ಹೇರಿಕೊಂಡು ಕಾಂಕ್ರೀಟ್​ ಮಷಿನ್​ ಸಾಗಾಟ ಮಾಡುತ್ತಿದ್ದ ಟೆಂಪೋ ಚಕ್ರ ರಸ್ತೆ ತಿರುವಿನಲ್ಲಿ ಹೂತು ಹೋಗಿದ್ದು, ಈ ಸಂದರ್ಭ ಟೆಂಪೋ ಹಿಂದುಗಡೆ ಕುಳಿತಿದ್ದ ಮಹಿಳೆ ಪವಾಡ ಸದೃಶ ಪಾರಾಗಿದ್ದಾರೆ.

ಬಳಿಕ ಜಾಕ್​ ಅಳವಡಿಸಿ ಟೆಂಪೋವನ್ನು ಮೇಲೆತ್ತಲಾಯಿತು. ಈ ಭಾಗದ ಅಪಾಯಕಾರಿ ರಸ್ತೆ ತಿರುವಿನಲ್ಲಿ ಅನೇಕ ಸಣ್ಣ ಪುಟ್ಟ ಅಪಘಾತಗಳು ಸಂಭವಿಸಿದ್ದು, ಚರಂಡಿ ಸರಿಪಡಿಸಬೇಕೆಂದು ಸ್ಥಳಿಯರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net