

ಯಡ್ರಾಮಿ ಅತ್ಯಾಚಾರ ಖಂಡಿಸಿ ಬೃಹತ್ ಪ್ರತಿಭಟನೆ > ಕಾರು, ಬೈಕ್, ಅಟೋಗಳು ಜಖಂ > ಸಿಡಿದೆದ್ದ ಬಂಜಾರ ಸಮುದಾಯ ಹಿಂದೂಪರ ಸಂಘಟನೆಗಳ ಸಾಥ್
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಜಿ¯್ಲೆಯ ಯಡ್ರಾಮಿ ಪಟ್ಟಣದಲ್ಲಿ ಅಪ್ರಾಪ್ತ ವಯಸ್ಕ ವಿದ್ಯಾರ್ಥಿನಿ ಮೇಲೆ ಖಾಸಗಿ ಶಾಲೆ ಮುಖ್ಯಸ್ಥ ನಡೆದ ಅತ್ಯಾಚಾರ ಪ್ರಕರಣ ಖಂಡಿಸಿ ಬಂಜಾರ ಸಮುದಾಯ ನೇತೃತ್ವದಲ್ಲಿ ಸಕಲ ಹಿಂದೂಪರ ಸಂಘಟನೆಗಳ ಸಹಯೋಗದೊಂದಿಗೆ ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.ಬೀದರ್‌ನಲ್ಲಿ ಹಿಂದು ಜಾಗೃತಿ ಸಮಾವೇಶಕ್ಕೆ ನಿಬಂಧಿಸಿದ ಬೆನ್ನಲ್ಲಿ ಕಲಬುರಗಿಯ ಹೋರಾಟ ಹಿಂದುಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಯಿತು. ಅಲ್ಲದೆ ಕಿಡಿಗೇಡಿಗಳ ಕೃತ್ಯದಿಂದಾಗಿ ಕೆಲವಡೆ ಗಲಾಟೆಗೂ ಸಾಕ್ಷಿಯಾಯಿತು.
ಪ್ರತಿಭಟನೆ ವೇಳೆ ಅಲ್ಲಲ್ಲಿ ಕಲ್ಲು ತೂರಾಟದ ಘಟನೆಗಳು ನಡೆದಿವೆ. ಕಿಡಿಗೇಡಿಗಳು ಕಲ್ಲು ತೂರಿದ್ದರಿಂದ ಕೆಲ ಕಾರು, ಬೈಕ್, ಆಟೋಗಳು ಜಖಂಗೊAಡಿವ. ಕೆಲ ಅಂಗಡಿಗಳ ಮೇಲೂ ಕಲ್ಲು ತೂರಾಟ ನಡೆಸಿದ್ದರಿಂದ ಕಾರು, ಆಟೋಗಳು ಚಾಲಕ ಸೇರಿ ಹಲವರಿಗೆ ಕಲ್ಲೇಟಿನಿಂದ ರಕ್ತಗಾಯಗಳಾಗಿವೆ.ಕೆಲವು ಕಡೆಗಳಲ್ಲಿ ಕಿಡಿಗೇಡಿಗಳು ಕಲ್ಲೆಸೆದು ಹಿಂಸಾಚಾರ ನಡೆಸಲು ಯತ್ನಿಸಿದ್ದರಿಂದ ಪೊಲೀಸರು ಲಾಠಿ ಪ್ರಹಾರ ನಡೆಸಿ ಗುಂಪುಗಳನ್ನು ಚದುರಿಸಿದರು.
ಮುಸ್ಲಿಂ ಸಮಾಜದ ಬಗ್ಗೆ ಅವಹೇಳನಕಾರಿ ಮಾತನಾಡಿರುವ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ವಿರುದ್ದ ಬ್ರಹ್ಮಪುರ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಹೀಗಾಗಿ ಮಣಿಕಂಠ ಬಂಧನಕ್ಕೆ ಪೊಲೀಸರು ಮುಂದಾಗಿದ್ದರು. ಆದರೆ, ಮಣಿಕಂಠ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿಲ್ಲ.ಇದರಿಂದಾಗಿ ಖಾಕಿ ಪಡೆ ಕೈಗೆ ಸಿಗಲಿಲ್ಲ.
ಬೃಹತ್ ಪ್ರತಿಭಟನಾ ಮೆರವಣಿಗೆ
ನಗರದ ಬಂಜಾರ ಭವನದಿಂದ ಪ್ರತಿಭಟನಾ ಮೆರವಣಿಗೆ ಶುರುವಾಗಿ ಲಾಹೋಟಿ ಪೆಟ್ರೋಲ್ ಬಂಕ್, ಮುಖ್ಯರಸ್ತೆ ಮಾರ್ಗವಾಗಿ ಸರ್ದಾರ್ ಪಟೇಲ್ ವೃತ್ತ ತಲುಪಿ ಜಿಲ್ಲಾಧಿಕಾರಿ ಕಚೇರಿ ಕಡೆಗೆ ಬಂದರು. ಈ ವೇಳೆಗೆ ಡಿಸಿ ಕಚೇರಿ ಪ್ರವೇಶ ದ್ವಾರವನ್ನು ಬಂದ್ ಮಾಡಿ ಪೊಲೀಸರು ಕಾವಲು ನಿಂತಿದ್ದರು. ಒಳನುಗ್ಗಲು ಯತ್ನಿಸಿದ ಈ ವೇಳೆಯಲ್ಲಿ ಕೆಲಹೊತ್ತು ತಳ್ಳಾಟ ನಡೆಯಿತು. ದಾರಿ ಮಧ್ಯೆ ಕೆಲವರು ಕಾರು, ಆಟೋಗಳನ್ನು ಜಖಂಗೊಳಿಸಿದರು. ಕೆಲ ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆಯಿತು. ಪರಿಸ್ಥಿತಿ ಬಿಗಡಾಯಿಸುತ್ತಿರುವುದನ್ನು ಕಂಡ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಬಂದ್ ಮಾಡಿದರು.ಇದರಿಂದಾಗಿ ಕೆಲಹೊತ್ತು ಅಘೋಷಿತ ಬಂದ್ ಆದಂತಾಗಿತ್ತು.
ಮಾಜಿ ಸಂಸದ ಡಾ.ಉಮೇಶ ಜಾಧವ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚುತ್ತಿವೆ. ಯಡ್ರಾಮಿ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರಿಗೆ ಗಲ್ಲು ಶಿಕ್ಷೆಯಾಗಲಿ ಎಂದು ಆಗ್ರಹಿಸಿದರು.
ಆಂದೋಲಾದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಯಡ್ರಾಮಿಯಲ್ಲದೇ ಕಲಬುರಗಿ ಜಿ¯್ಲÉಯಲ್ಲಿ ಹಿಂದೂಗಳ ಅದರಲ್ಲೂ ದಲಿತರ ಮೇಲೂ ಅತ್ಯಾಚಾರ ನಡೆದಿವೆ ಎಂದು ಉದಾಹರಣೆ ಸಮೇತ ವಿವರಣೆ ನೀಡಿದರು. ಜಿ¯್ಲÁ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಯಾಕೆ ಉತ್ತರ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ಯಡ್ರಾಮಿ ಬಾಲಕಿಗೆ ಪರಿಹಾರ ಬೇಡ. ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿ ಕೊಡಿ ಎಂದು ಆಗ್ರಹಿಸಿದರು.