ಮನೆಯ ಮೇಲೆ ಬಿದ್ದ ಕಲ್ಲು ಬಂಡೆ

Stone slide
Published on

ಹೊನ್ನಾವರ: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮವಾಗಿ ತಾಲೂಕಿನ ಹೊಸಾಕುಳಿಯಲ್ಲಿ ಮನೆಯ ಮೇಲೆ ಬೃಹತ್ ಬಂಡೆಗಲ್ಲುಗಳು ಬಿದ್ದು ಹಾನಿಯಾದ ಘಟನೆ ಗುರುವಾರ ನಡೆದಿದೆ.
ಹೊಸಾಕುಳಿಯ ವಿಶ್ವೇಶ್ವರ ಹೆಗಡೆ ಅವರ ಮನೆಯ ಪಕ್ಕದ ಗುಡ್ಡದಿಂದ ಬಂಡೆಗಲ್ಲು ಉರುಳಿ ಬಿದ್ದಿದ್ದು, ಮನೆಯ ಗೋಡೆ, ಮೇಲ್ಛಾವಣಿ ಕುಸಿದು ಬಿದ್ದಿದೆ. ಒಳಗಡೆ ಇದ್ದ ಟಿವಿ, ರೆಪ್ರಿಜರೇಟರ್, ವಾಷಿಂಗ್ ಮಿಷನ್ ಸೇರಿದಂತೆ ಹಲವು ಗ್ರಹೋಪಯೋಗಿ ವಸ್ತುಗಳು ಹಾನಿಯಾಗಿವೆ. ಬಂಡೆಗಲ್ಲಿ ಬಿದ್ದ ಸಮಯದಲ್ಲಿ ಮನೆಯವರು ಎಚ್ಚೆತ್ತುಕೊಂಡಿದ್ದರಿಂದ ಯಾವುದೇ ಪ್ರಾಣಾಪಾಯ ಆಗಿಲ್ಲ. ಸ್ಥಳಕ್ಕೆ ನೋಡಲ್ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net