ಕದ್ದುಮುಚ್ಚಿ ಮದ್ಯ ಮಾರಿದರೆ ಕ್ರಮ: ಬಾರ್ ಮಾಲೀಕರಿಗೆ ಪಿಐ ಕೆ.ಹೊಸಕೇರಪ್ಪ ಎಚ್ಚರಿಕೆ

Untitled design (2)
Published on

ದೇವದುರ್ಗ: ಮೊಹರಂ ಶಾಂತಿ, ಸುವ್ಯವಸ್ಥೆಯಿಂದ ಆಚರಣೆ ಮಾಡುವ ದೃಷ್ಟಿಯಿಂದ ಬಾರ್ ಹಾಗೂ ರೆಸ್ಟೋರೆಂಟ್‌ಗಳಿಗೆ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಬಾರ್ ಮಾಲೀಕರಿಗೆ ಪಿಐ ಕೆ.ಹೊಸಕೇರಪ್ಪ ಸೂಚಿಸಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬಾರ್ ಮತ್ತು ರೆಸ್ಟೋರೆಂಟ್ ಮಾಲೀಕರ ಸಭೆಯಲ್ಲಿ ಸೋಮವಾರ ಮಾತನಾಡಿದರು. ಮೊಹರಂ ಹಬ್ಬದಂದು ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಶಾಂತಿ, ಸುವ್ಯವಸ್ಥೆ ಕಾಪಾಡಲು ಈ ಕ್ರಮ ಕೈಗೊಳ್ಳಲಾಗಿದೆ. ನಿಷೇಧದ ದಿನ ಯಾವುದೇ ಕಾರಣಕ್ಕೂ ಬಾರ್ ತೆರೆಯಬಾರದು. ತೆರೆದಿದ್ದು ಕಂಡುಬಂದರೆ ದಾಳಿ ನಡೆಸಿ ಕ್ರಮ ವಹಿಸಲಾಗುವುದು ಎಂದು ಎಚ್ಚರಿಸಿದರು.

ನಿಗದಿಪಡಿಸಿದ ಸಮಯದಲ್ಲಿ ಮದ್ಯ ಮಾರಾಟ ಮಾಡಬೇಕು. ನಿಷೇಧದ ದಿನ ಹೊರಗಡೆ ಎಲ್ಲಿಯೂ ಕದ್ದುಮುಚ್ಚಿ ಮದ್ಯ ಮಾರಾಟ ಮಾಡಬಾರದು. ಹಬ್ಬದ ಸಂದರ್ಭದಲ್ಲಿ ಶಾಂತಿ ನೆಲೆಸಲು ಬಾರ್ ಮಾಲೀಕರು ಸಹಕಾರ ನೀಡಬೇಕು ಎಂದು ಪಿಐ ಹೊಸಕೇರಪ್ಪ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net