ಗಂಗೊಳ್ಳಿ: ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ 2024-25ನೇ ಸಾಲಿನಲ್ಲಿ 1.14 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.17 ಡಿವಿಡೆಂಡ್ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ. ಸಹಕಾರಿಯ ದುಡಿಯುವ ಬಂಡವಾಳ 100.80 ಕೋಟಿ ರೂ. ಮತ್ತು 85.56 ಕೋಟಿ ರೂ. ಠೇವಣಿ ಹೊಂದಿದೆ. 24.54 ಕೋಟಿ. ರೂ.ಗಳನ್ನು ವಿವಿಧ ಬ್ಯಾಂಕುಗಳಲ್ಲಿ ಹೂಡಿಕೆ ವಾಡಲಾಗಿದೆ ಎಂದು ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯ ಅಧ್ಯಕ್ಷ ಜಿ.ವೆಂಕಟೇಶ ಶೆಣೈ ಹೇಳಿದರು.
ಗಂಗೊಳ್ಳಿಯ ಶ್ರೀ ವೀರ ವಿಠಲ ಸಭಾಗೃಹದಲ್ಲಿ ಭಾನುವಾರ ಜರುಗಿದ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯ 105ನೇ ಸಾವಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ವಾತನಾಡಿದರು.
ತ್ವರಿತ ಹಾಗೂ ಉತ್ಕ ೃಷ್ಟ ದರ್ಜೆಯ ಗ್ರಾಹಕ ಸೇವೆ ನೀಡಲು ಮತ್ತು ಸದಸ್ಯರಿಗೆ ನಗದು ರಹಿತ ವ್ಯವಹಾರ ನಡೆಸಲು ಸಹಕಾರಿ ಶ್ರಮಿಸುತ್ತಿದೆ. 2025-26ನೇ ಸಾಲಿನಲ್ಲಿ ಕೈಗೊಳ್ಳಬಹುದಾದ ಅಭಿವದ್ಧಿ ಕಾರ್ಯಕ್ರಮಗಳ ಬಗ್ಗೆ ಆಡಳಿತ ಮಂಡಳಿ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದು ಅವುಗಳನ್ನು ಹಂತ ಹಂತವಾಗಿ ಕಾರ್ಯಗತಗೊಳಿಸುವಲ್ಲಿ ಶ್ರಮಿಸುತ್ತಿದೆ ಎಂದರು.
ವಾಜಿ ಅಧ್ಯಕ್ಷ ಎಂ.ಮಧುಕರ ಪೈ, ವಾಜಿ ನಿರ್ದೇಶಕ ಡಾ.ಕಾಶೀನಾಥ ಪೈ, ಸದಸ್ಯ ಸುದನೇಶ ಶ್ಯಾನುಭಾಗ್, ಚಿನ್ನಾಭರಣ ಪರೀಕ್ಷಕ ಜಿ.ಉದಯ ಕುವಾರ್ ಶೇಟ್, ಉಪ್ಪುಂದ ಶಾಖಾಧಿಕಾರಿ ರಾಜೇಶ ಪ್ರಭು, ಹಿರಿಯ ಸಹಾಯಕ ಗಿರೀಶ್ ಶ್ಯಾನುಭಾಗ್ ಅವರನ್ನು ಗೌರವಿಸಲಾಯಿತು.
ಉಪಾಧ್ಯಕ್ಷ ಜಿ.ವಿಶ್ವನಾಥ ಆಚಾರ್ಯ, ನಿರ್ದೇಶಕರಾದ ಎನ್.ವಾಧವ ಕಿಣಿ, ಬಿ.ರಾವೇಂದ್ರ ಪೈ, ಜಿ.ವೇದವ್ಯಾಸ ಆಚಾರ್ಯ, ನಾಗಪ್ರಸಾದ್ ಪೈ ಎಂ.ಜಿ., ವಾಲಾ ಕೆ.ನಾಯಕ್, ಗೀತಾ ಜಿ.ನಾಯಕ್, ಮಹಾಬಲ ಪೂಜಾರಿ, ಕಿರಣ್ ಫಿಲಿಪ್ ಪಿಂಟೋ, ಜಿ.ವೆಂಕಟೇಶ ನಾಯಕ್, ಯು.ವಿಷ್ಣು ಪಡಿಯಾರ್ ಉಪಸ್ಥಿತರಿದ್ದರು.
ನಿರ್ದೇಶಕ ಎಸ್.ವೆಂಕಟರಮಣ ಆಚಾರ್ಯ ಸ್ವಾಗತಿಸಿ, ಕೆ.ಪರಮೇಶ್ವರ ನಾಯಕ್ ವಂದಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣೇಶ ನಾಯಕ್ ನಿರೂಪಿಸಿದರು.