ಉಡುಪಿ ಪೊಲೀಸರ ಭರ್ಜರಿ ಬೇಟೆ...

UDP-11-13-Gaanja
Published on

ಗಾಂಜಾ ಸಾಗಾಟ, ಇಬ್ಬರ ಬಂಧನ

40 ಲಕ್ಷ ರೂ. ಮೊತ್ತದ 65 ಕೆಜಿ ಗಾಂಜಾ ವಶ

ವಿಜಯವಾಣಿ ಸುದ್ದಿಜಾಲ ಉಡುಪಿ

ಲಾರಿಯಲ್ಲಿ ಮಾದಕ ವಸ್ತು ಗಾಂಜಾ ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿರುವ ಮಲ್ಪೆ ಠಾಣೆಯ ಪೊಲೀಸರು, ಇಬ್ಬರನ್ನು ಬಂಧಿಸಿದ್ದಾರೆ. 40 ಲಕ್ಷ ರೂಪಾಯಿಗೂ ಅಧಿಕ ಮೊತ್ತದ ಗಾಂಜಾ, ಸಾಗಾಟಕ್ಕೆ ಬಳಸಿದ್ದ ಲಾರಿ, 1,520 ರೂ. ನಗದು ಹಾಗೂ 2 ಮೊಬೈಲ್​ ಫೋನ್​ ವಶಕ್ಕೆ ಪಡೆಯಲಾಗಿದೆ.

UDP-11-13A-Gaanja
UDP-11-13B-Gaanja
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿ ಕುಪ್ಪೆ ನಿವಾಸಿ ಗಣೇಶ ವೀರಭದ್ರ ಗೌಡ (38), ಆಂಧ್ರ ಪ್ರದೇಶದ ಅನಂತಪುರಂ ಜಿಲ್ಲೆಯ ಗೋರಂಟ್ಲದ ಮೋಹನ ರಾವ್​ ಕಾಲನಿಯ ಪಿ. ಗೋಪಾಲ ಶಿವ ರೆಡ್ಡಿ (43) ಬಂಧಿತರು.

ಕಡೆಕಾರು ಗ್ರಾಮದ ಕಿನ್ನಿಮುಲ್ಕಿ ಸ್ವಾಗತ ಗೋಪುರದ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡಲು ಬಂದಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ.

ಕಾರ್ಕಳ ಉಪ-ವಿಭಾಗದ ಸಹಾಯಕ ಪೊಲೀಸ್​ ಅಧೀಕ್ಷಕಿ ಡಾ. ಹರ್ಷಾ ಪ್ರಿಯಂವದಾ (ಐಪಿಎಸ್​) ನಿರ್ದೇಶನ, ಉಡುಪಿ ಡಿವೈಎಸ್ಪಿ ಡಿ.ಟಿ. ಪ್ರಭು ಮಾರ್ಗದರ್ಶನದಲ್ಲಿ ಮಲ್ಪೆ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ, ಸೆನ್​ ಠಾಣಾ ಸಿಬ್ಬಂದಿ ಪ್ರವೀಣಕುಮಾರ್​, ಯತೀನ್​ಕುಮಾರ್​, ಪ್ರವೀಣ ಶೆಟ್ಟಿಗಾರ್​, ರಾಘವೇಂದ್ರ, ದೀಕ್ಷಿತ್​, ನಿಲೇಶ್​, ಮಾಯಪ್ಪ, ಮುತ್ತಪ್ಪ, ಪವನ್​ ಹಾಗೂ ಮಲ್ಪೆ ಠಾಣೆಯ ಪ್ರವೀಣ, ಉಡುಪಿ ಸಂಚಾರ ಪೊಲೀಸ್​ ಠಾಣೆಯ ಶ್ರೀನಿವಾಸ ಇತರರು ಕಾರ್ಯಾಚರಣೆ ನಡೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net