ಸಮುದಾಯ ಭವನ ನಿರ್ಮಾಣಕ್ಕೆ ಕ್ರಮ

07SPT04
Published on

 ಸೋಮವಾರಪೇಟೆ: ಹಾರಂಗಿ ಡ್ಯಾಂ ನಿರ್ಮಾಣ ಮಾಡುವ ಸಂದರ್ಭ ಮುಳುಗಡೆಯಿಂದ ಆಸ್ತಿ ಕಳೆದುಕೊಂಡವರು ಯಡವನಾಡು ಗ್ರಾಮದಲ್ಲಿ ಬಂದು ಬದುಕು ಕಟ್ಟಿಕೊಂಡ ನಿವಾಸಿಗಳಿಗೆ ಅಗತ್ಯ ಮೂಲ ಸೌಕರ್ಯ ಒದಗಿಸಬೇಕಾದುದು ಸರ್ಕಾರದ ಆದ್ಯ ಕರ್ತವ್ಯ. ಹಾಗಾಗಿ ಗ್ರಾಮಸ್ಥರ ಕೋರಿಕೆಗಳಿಗೆ ಅಗತ್ಯವಾಗಿ ಸ್ಪಂದಿಸಲಾಗುತ್ತದೆ ಎಂದು ಶಾಸಕ ಡಾ. ಮಂತರಗೌಡ ಹೇಳಿದರು.

ಯಡವನಾಡು ಗ್ರಾಮದ ಶ್ರೀ ಶಿವಬಸವೇಶ್ವರ ದೇವಾಲಯದಲ್ಲಿ ನಡೆದ ಪೂಜೋತ್ಸವ ಸೋಮವಾರ ಪಾಲ್ಗೊಂಡು ನಂತರ ನಡೆದ ಸಭೆಯಲ್ಲಿ ಮಾತನಾಡಿದರು. ಗ್ರಾಮದ ನಿವಾಸಿಗಳ ಬೇಡಿಕೆಗಳನ್ನು ಅರಿತು ಅದರಂತೆ ಕಾರ್ಯನಿರ್ವಹಿಸಬೇಕಿದೆ. ಸಮುದಾಯ ಭವನ ನಿರ್ಮಾಣಕ್ಕೆ ಕಾವೇರಿ ನೀರಾವರಿ ಅಧಿಕಾರಿಗಳ ಬಳಿ ಚರ್ಚೆ ನಡೆಸಲಾಗುವುದು. ಅಗತ್ಯ ಬಂದಲ್ಲಿ ಜಲ ಸಂಪನ್ಮೂಲ ಸಚಿವರ ಬಳಿಯೂ ಚರ್ಚಿಸುವುದಾಗಿ ಹೇಳಿದರು. ಈ ಬಾರಿ ಉತ್ತಮ ಮಳೆಯಾಗುವ ಎಲ್ಲ ಲಕ್ಷಣಗಳು ಗೋಚರವಾಗುತ್ತಿವೆ. ದೇವರ ಅನುಗ್ರಹದಿಂದ ಅನ್ನದಾತರ ಬದುಕು ಹಸನಾಗಲಿ ಎಂದು ಆಶಿಸಿದರು.

ಈ ಸಂದರ್ಭ ದೇವಾಲಯ ಸಮಿತಿಯ ಪದಾದಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net