ಬೇಸಿಗೆಯಲ್ಲಿ ಅರೋಗ್ಯ ಕಾಪಾಡಿಕೊಳ್ಳಿ

ಸಿರಿಗೇರಿ ಸಮೀಪದ ಎಂ.ಸುಗೂರಿನಲ್ಲಿ ಕಣ್ಣಿನ ಉಚಿತ ತಪಾಸಣೆ ಶಿಬಿರದಲ್ಲಿ ವೈದ್ಯಾಧಿಕಾರಿಗಳಾದ ಅಪರ್ಣಾ ಮತ್ತು ಅನನ್ಯಾ ಜನರ ಕಣ್ಣಿನ ತಪಾಸಣೆ ಮಾಡಿದರು. ಗ್ರಾಪಂ ಅಧ್ಯಕ್ಷ ಬಸವರಾಜ, ಉಪಾಧ್ಯಕ್ಷೆ ಶಾರದಾ, ಕಾರ್ಯದರ್ಶಿ ಕೆ.ಶಿವಮೂರ್ತಿ ಇದ್ದರು.
ಸಿರಿಗೇರಿ ಸಮೀಪದ ಎಂ.ಸುಗೂರಿನಲ್ಲಿ ಕಣ್ಣಿನ ಉಚಿತ ತಪಾಸಣೆ ಶಿಬಿರದಲ್ಲಿ ವೈದ್ಯಾಧಿಕಾರಿಗಳಾದ ಅಪರ್ಣಾ ಮತ್ತು ಅನನ್ಯಾ ಜನರ ಕಣ್ಣಿನ ತಪಾಸಣೆ ಮಾಡಿದರು. ಗ್ರಾಪಂ ಅಧ್ಯಕ್ಷ ಬಸವರಾಜ, ಉಪಾಧ್ಯಕ್ಷೆ ಶಾರದಾ, ಕಾರ್ಯದರ್ಶಿ ಕೆ.ಶಿವಮೂರ್ತಿ ಇದ್ದರು.
Published on

ಸಿರಿಗೇರಿ: ಬೇಸಿಗೆ ತಾಪಮಾನ ಹೆಚ್ಚಿರುವುದರಿಂದ ಹಣ್ಣು, ತರಕಾರಿಗಳನ್ನು ಸೇವಿಸಿ, ಹೆಚ್ಚು ನೀರು ಕುಡಿಯಬೇಕು. ಈ ಮೂಲಕ ಅರೋಗ್ಯ ಕಾಪಾಡಿಕೊಳ್ಳಿ ಎಂದು ಗ್ರಾಪಂ ಕಾರ್ಯದರ್ಶಿ ಕೆ.ಶಿವಮೂರ್ತಿ ಹೇಳಿದರು.

ಎಂ.ಸೂಗೂರಿನ ಶ್ರೀ ಗುರುಪಾದಪ್ಪ ತಾತನ ಮಠದ ಆವರಣದಲ್ಲಿ ಬಳ್ಳಾರಿಯ ಬಿಮ್ಸ್ ವೈದ್ಯರಿಂದ ಗುರುವಾರ ಹಮ್ಮಿಕೊಂಡಿದ್ದ ಕಣ್ಣಿನ ಉಚಿತ ತಪಾಸಣೆ ಶಿಬಿರದಲ್ಲಿ ಮಾತನಾಡಿದರು. ಹಿರಿಯ ಅರೋಗ್ಯ ನಿರೀಕ್ಷಣಾಧಿಕಾರಿ ಚಿದಾನಂದಪ್ಪ ಮಾತನಾಡಿ, ಕಣ್ಣಿನ ಸುರಕ್ಷಾ ಕ್ರಮಗಳನ್ನು ತಿಳಿದುಕೊಳ್ಳಿ. ಜಿಲ್ಲಾ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯಿರಿ ಎಂದರು. 95 ಹೊರ ರೋಗಿಗಳ ಎಚ್‌ಐವಿ, ಬಿಪಿ, ಶುಗರ್ ಪರೀಕ್ಷಿಸಿ 7 ಜನರನ್ನು ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕಳುಹಿಸಲಾಯಿತು. ಗ್ರಾಪಂ ಅಧ್ಯಕ್ಷ ಬಸವರಾಜ, ಉಪಾಧ್ಯಕ್ಷೆ ಶಾರದಾ, ಹಿರಿಯ ಅರೋಗ್ಯ ನಿರೀಕ್ಷಣಾಧಿಕಾರಿಗಳಾದ ಚಿದಾನಂದಯ್ಯ, ವೆಂಕಟೇಶಲು, ಕಿರಣ ಕುಮಾರ್, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net