ಆಹಾರದಲ್ಲಿ ರುಚಿ, ಶುಚಿತ್ವ ಕಾಪಾಡಿಕೊಳ್ಳಿ

22_03_Mdy_02(Food Commison)
Published on

ಮಂಡ್ಯ: ನಗರದ ಕೆರೆಯಂಗಳದಲ್ಲಿರುವ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ರಾಜ್ಯ ಆಹಾರ ಆಯೋಗ ಅಧ್ಯಕ್ಷ ಡಾ.ಎಚ್.ಕೃಷ್ಣ ಶುಕ್ರವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹಾಸ್ಟೆಲ್‌ನಲ್ಲಿ ಆಹಾರ ಪದಾರ್ಥ ಸಂಗ್ರಹಿಸುವ ಕೊಠಡಿ, ಗುಣಮಟ್ಟ, ಸ್ವಚ್ಛತೆ, ಶುಚಿತ್ವದ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ವಿದ್ಯಾರ್ಥಿನಿಯರಿಂದ ಒಂದಷ್ಟು ದೂರು ಬಂದಿದೆ. ಮುಖ್ಯವಾಗಿ ಆಹಾರ ಬದಲಾವಣೆಗೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ರಮ ವಹಿಸುವಂತೆ ನಿಲಯಪಾಲಕರು ಮತ್ತು ಅಧಿಕಾರಿಗೆ ಸೂಚನೆ ನೀಡಲಾಗಿದೆ. ಮುಖ್ಯವಾಗಿ ಗುಣಮಟ್ಟದ ಆಹಾರ ಪದಾರ್ಥಗಳು ಮತ್ತು ರುಚಿ ಶುಚಿತ್ವದ ಆಹಾರ ವಿತರಿಸಬೇಕು. ಯಾವುದೇ ದೂರು ಬಾರದಂತೆ ವಿದ್ಯಾರ್ಥಿನಿಯರ ಅರೋಗ್ಯದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಿ ಎಂದು ಸೂಚಿಸಲಾಗಿದೆ ಎಂದರು.

ಹಾಸ್ಟೆಲ್‌ನಲ್ಲಿ ಕಂಪ್ಯೂಟರ್‌ಗಳ ಸಮಸ್ಯೆ ಇದೆ. ಪ್ರಸ್ತುತ 5 ಕಂಪ್ಯೂಟರ್ ಇದ್ದು, 120 ವಿದ್ಯಾರ್ಥಿನಿಯರಿಗೆ ಸಾಲುವುದಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.

ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ, ತಾಲೂಕು ಅಧಿಕಾರಿ ಮಂಜುನಾಥ್, ನಿಲಯಪಾಲಕಿ ಎಚ್.ಎಂ.ಅವಿತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net