ಮಾದಕವಸ್ತು, ದುಶ್ಚಟಗಳಿಂದ ದೂರವಿರಿ

Untitled-1
ಚಿಂತಾಮಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಮಾದಕ ವ್ಯಸನಗಳ ಕುರಿತ ಅರಿವು ಮತ್ತು ಜಾಗೃತಿ ಅಭಿಯಾನದಲ್ಲಿ ಜಿ.ಎಸ್​.ಪಾಟೀಲ್​, ರೇಣುಕಾ, ಕುಸುಮಾ ಮಂಗಳಾ, ವಿ.ವಿಶ್ವನಾಥ್​ ಮತ್ತಿತರರು ಭಾಗವಹಿಸಿದ್ದರು.
Published on

ಚಿಂತಾಮಣಿ : ಮಾದಕವಸ್ತು ಮತ್ತು ದುಶ್ಚಟಗಳಿಂದ ವಿದ್ಯಾರ್ಥಿಗಳು ದೂರವಿರಬೇಕು. ಇಂದಿನ ಯುವ ಜನತೆ ಡ್ರಗ್ಸ್​ನಂತಹ ವ್ಯಸನಕ್ಕೆ ದಾಸರಾಗುತ್ತಿರುವುದು ಕಳವಳಕಾರಿಯಾಗಿದೆ ಎಂದು ಚಿಂತಾಮಣಿ ಅಬಕಾರಿ ಉಪಧೀಕ್ಷ ಜಿ.ಎಸ್​.ಪಾಟೀಲ್​ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತ್​ ಸ್ಕೌಟ್ಸ್​ ಮತ್ತು ಗೈಡ್ಸ್​ ಹಾಗೂ ನೆಹರು ಯುವ ಕೇಂದ್ರ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಾದಕ ವ್ಯಸನಗಳ ಅರಿವು ಮತ್ತು ಜಾಗೃತಿ ಅಭಿಯಾನದಲ್ಲಿ ಮಾತನಾಡಿ, ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಜೀವನ ರೂಪಿಸಿಕೊಳ್ಳಿ. ದುಶ್ಚಟಕ್ಕೆ ಬಲಿಯಾದರೆ ಸಮಾಜ ಕೀಳಾಗಿ ಕಾಣುತ್ತದೆ ಎಂದರು.

ಅಬಕಾರಿ ನಿರೀಕ್ಷಕಿ ರೇಣುಕಾ ಮಾತನಾಡಿ, ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯ ಮತ್ತು ಗೌರವ ಹಾಳಾಗುತ್ತದೆ. ತಂದೆ&ತಾಯಿಗೆ ಉತ್ತಮ ಮಕ್ಕಳಾಗಿ ಸಮಾಜಕ್ಕೆ ಏನಾದರೂ ಸೇವೆ ಸಲ್ಲಿಸುವಂತೆ ತಿಳಿಸಿದರು. ಹಾಗೂ ಮಾದಕ ವಸ್ತು ಬಳಸದಂತೆ ಪ್ರತಿಜ್ಞಾವಿಧಿ ಬೋಧಿಸಿದರು.

ಪ್ರಾಂಶುಪಾಲೆ ಕುಸುಮ ಮಂಗಳಾ ಮಾತನಾಡಿ, ವ್ಯಸನಿಗಳಿಂದ ಸಮಾಜದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕುಟುಂಬದಲ್ಲಿ ಶಾಂತಿ, ನೆಮ್ಮದಿ ಹಾಳಾಗಲು ಮಾದಕ ವಸ್ತು ಸೇವನೆಯೇ ಕಾರಣ ಎಂದು ಹೇಳಿದರು.

ಭಾರತ್​ ಸ್ಕೌಟ್ಸ್​ ಮತ್ತು ಗೈಡ್ಸ್​ ಜಿಲ್ಲಾ ಸಂಟನಾ ಆಯುಕ್ತ ವಿ.ವಿಶ್ವನಾಥ್​, ಕಾಲೇಜು ಟಕದ ದೈಹಿಕ ನಿರ್ದೇಶಕ ರೋವರ್​ ಲೀಡರ್​ ಪ್ರವಿಣ್​, ಮೊಹಮ್ಮದ್​ ಪಾಷಾ, ಯುವ ಸಮಿತಿಯ ಸಮೀರ್​, ವರುಣ್​, ಚರಣ್​, ಮಾನಸಾ, ಕಾವ್ಯಾ, ಶಿರಿಷಾ, ಪ್ರೇಮಾ ಹಾಗೂ ಸರ್ಕಾರಿ ಮಹಿಳಾ ಕಾಲೇಜ ಮತ್ತು ಬಾಲಕರ ಕಾಲೇಜಿನ ರೋವರ್ಸ್​, ರೇಂರ್ಜಸ್, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net