ದುಶ್ಚಟಗಳಿಂದ ದೂರವಿದ್ದು ಆರೋಗ್ಯವಾಗಿರಿ

ಕಂಪ್ಲಿಯಲ್ಲಿ ಎಸ್.ಡಿ.ಪಿ.ಐ ವತಿಯಿಂದ ಆಯೋಜಿಸಿದ್ದ ಶಿಬಿರದಲ್ಲಿ ರಕ್ತದಾನ ಮಾಡಿದವರಿಗೆ ಪ್ರಮಾಣಪತ್ರ ನೀಡಲಾಯಿತು. ಧರ್ಮಗುರು ಸೈಯ್ಯದ್ ಷಾಹ್ ಅಬುಲ್‌ಹಸನ್ ಖಾದ್ರಿ, ಸಾಂಗತ್ರಯ ಸಂಸ್ಕೃತ ಪಾಠಶಾಲೆ ಪ್ರಾಚಾರ್ಯ ಘನಮಠಯ್ಯ ಹಿರೇಮಠ, ಇಸಿಐ ಚರ್ಚ್ ಫಾದರ್ ರೇವು ಪೀಟರ್, ಎಸ್.ಡಿ.ಪಿ.ಐ ಕ್ಷೇತ್ರಾಧ್ಯಕ್ಷ ಮಹ್ಮದ್ ರಫಿಕ್, ರಕ್ತ ಕೇಂದ್ರದ ತಾಂತ್ರಿಕ ಮೇಲ್ವಿಚಾರಕ ಸಿ.ಎಂ.ಮಂಜುನಾಥ ಇತರರಿದ್ದರು.

Published on

ಕಂಪ್ಲಿ: ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲು ಯುವಕರು ಮುಂದಾಗಬೇಕು ಎಂದು ಅಂಜುಮನ್-ಎ-ಖಿದ್ಮತೆ ಇಸ್ಲಾಂ ನಗರ ಸಮಿತಿ ಅಧ್ಯಕ್ಷ ಮಸ್ತಾನ್ ವಲಿ ಕಡಪ ಹೇಳಿದರು.

ಪಟ್ಟಣದ ಇಂದಿರಾನಗರದಲ್ಲಿ ಸೋಷಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಬಳ್ಳಾರಿಯ ಸ್ವಾಮಿ ವಿವೇಕಾನಂದ ಚಾರಿಟಬಲ್ ರಕ್ತ ಕೇಂದ್ರದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು. ರಕ್ತದಾನ ಯುವಜನತೆಯ ಆದ್ಯ ಕರ್ತವ್ಯವಾಗಬೇಕು. ಯುವಕರು ದುಶ್ಚಟಗಳಿಂದ ದೂರವಾಗಿ ಆರೋಗ್ಯವಂತರಾಗಬೇಕು ಎಂದು ಸಲಹೆ ನೀಡಿದರು.

ಧರ್ಮಗುರು ಸೈಯ್ಯದ್ ಷಾ ಅಬುಲ್ ಹಸನ್ ಖಾದ್ರಿ, ಸಾಂಗತ್ರಯ ಸಂಸ್ಕೃತ ಪಾಠಶಾಲೆ ಪ್ರಾಚಾರ್ಯ ಘನಮಠಯ್ಯ ಹಿರೇಮಠ, ಇಸಿಐ ಚರ್ಚ್ ಫಾದರ್ ರೇವು ಪೀಟರ್, ಎಸ್.ಡಿ.ಪಿ.ಐ ಕ್ಷೇತ್ರಾಧ್ಯಕ್ಷ ಮಹ್ಮದ್ ರಫಿಕ್, ರಕ್ತ ಕೇಂದ್ರದ ತಾಂತ್ರಿಕ ಮೇಲ್ವಿಚಾರಕ ಸಿ.ಎಂ.ಮಂಜುನಾಥ, ಪ್ರಮುಖರಾದ ದಸ್ತಗಿರಿ, ದೌಲಾಖಾನ್, ಇಮ್ರಾನ್‌ಖಾನ್, ಜಹೀರ್ ಉಡೇಗೋಳ್, ಎಂ.ರಾಜಭಕ್ಷಿ, ಬಡಿಗೇರ ಜಿಲಾನ್‌ಸಾಬ್, ಅಕ್ಕಿಜಿಲಾನ್, ಖಮರ್ ಸಾಹೇಬ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net