ಹಟ್ಟಿಚಿನ್ನದಗಣಿ: ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರ ಸ್ಮರಣಾರ್ಥ ರಹೇಮತ್ ಫೌಂಡೇಷನ್ ಮತ್ತು ಚಾರಿಟಬಲ್ ಟ್ರಸ್ಟ್ ಹಾಗೂ ಲಿಂಗಸುಗೂರು ಸ್ವಾಮಿ ವಿವೇಕಾನಂದ ರಕ್ತ ಭಂಡಾರ ಸಹಯೋಗದೊಂದಿಗೆ ಶುಕ್ರವಾರ ಪಟ್ಟಣದ ಉರ್ದು ಶಾಲೆಯಲ್ಲಿ ರಕ್ತದಾನ ಶಿಬಿರ ನಡೆಯಿತು.
ಪಪಂ ಅಧ್ಯಕ್ಷ ಎಂ.ಡಿ.ಆರ್. ಸಂಧಾನಿ ಮಾತನಾಡಿ, ದೇಶಕ್ಕಾಗಿ ಪ್ರಾಣವನ್ನೇ ಮುಡುಪಾಗಿಡುವ ವೀರ ಯೋಧರನ್ನು ಮರೆಯಬಾರದು. ಹುತಾತ್ಮ ಯೋಧರ ನೆನಪಿನಲ್ಲಿ ರಕ್ತದಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಶ್ಲಾಘನೀಯವಾಗಿದ್ದು, ಅಮೂಲ್ಯ ಜೀವ ಉಳಿಸಲು ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು ಎಂದರು.
ಪ್ರಮುಖರಾದ ಶ್ರೀಕಾಂತ ಗುರುಗುಂಟಾ, ಶ್ರೀನಿವಾಸ್, ಮಧುಶ್ರೀ, ಶರಣಗೌಡ ಗುರಿಕಾರ, ಇಸ್ಮಾಯಿಲ್ ಪಾಷಾ, ಸುರೇಶಗೌಡ ಇತರರಿದ್ದರು.