

ವಿಜಯವಾಣಿ ಸುದ್ದಿಜಾಲ ಕೊಕ್ಕಡ
ಸೌತಡ್ಕ ದೇವರ ಭೂಮಿ ಕಬಳಿಕೆ ಮಾಡಿದವರಿಂದ ವಾಪಾಸು ಪಡೆದು ನ್ಯಾಯ ಕೊಡಿಸದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುತ್ತೇವೆ ಎಂದು ಸಾಹಿತಿ, ಚಿಂತಕ ಎಂ.ಜಿ.ಹೆಗಡೆ ಹೇಳಿದರು.
ಸೌತಡ್ಕ ಮಹಾಗಣಪತಿ ದೇವಾಲಯ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಜಮೀನು ಪ್ರಕರಣ ಸಮಗ್ರ ತನಿಖೆ ನಡೆಸಲು ಆಗ್ರಹಿಸಿ ಎರಡನೇ ದಿನದ ಧರಣಿಯಲ್ಲಿ ಮಾತನಾಡಿದರು.
ವೇದಿಕೆಯ ಕಾನೂನು ಸಲಹೆಗಾರ ಬಿ.ಎಂ.ಭಟ್, ಲೋಕೇಶ್ವರಿ ವಿನಯಚಂದ್ರ ಮಾತಾಡಿದರು. ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಸ್ವಾಗತಿಸಿದರು. ಕಾರ್ಯದರ್ಶಿ ಶ್ಯಾಮರಾಜ್, ಮುಖಂಡರಾದ ಪ್ರಶಾಂತ ರೈ, ವಿಶ್ವನಾಥ ಕೊಲ್ಲಾಜೆ, ವಿಶ್ವನಾಥ ಶೆಟ್ಟಿ, ಸುಬ್ರಹ್ಮಣ್ಯ ಶಗ್ರಿತ್ತಾಯ, ತುಕ್ರಪ್ಪ ಶೆಟ್ಟಿ, ಕೃಷ್ಫಪ್ಪ ಗೌಡ, ಡೆಂಜ ವೆಂಕಟ್ರಮಣ ಉಪ್ಪಾರ್ಣ, ರತ್ನಾಕರ ಪಾಂಙಣ್ಣಾಯ, ನಾಗೇಶ ಗೌಡ, ಜಯಪ್ರಕಾಶ ಬಾಳ್ತಿಲ್ಲಾಯ, ವಕೀಲ ಮನೋಹರ, ಲೋಕೇಶ್ ಕುದ್ಯಾಡಿ, ಲಕ್ಷ್ಮಣ ಗೌಡ ಪಾಂಗಳ, ದಾಮೋದರ ಶೆಟ್ಟಿ, ತನುಜಾ ಶೇಖರ್, ಉಷಾ ಲಕ್ಷ್ಮಣ ಜಯಂತ ಗೌಡ ಮಾಸ್ತಿಕಲ್ಲು, ಜಾರಪ್ಪ ಗೌಡ, ಕಿರಣ ಪ್ರಭಾ, ಉಷಾ ಶಬರಾಯ, ಚಂದ್ರಕಲಾ ವಿ. ಶೆಟ್ಟಿ, ನಮಿತಾ ಪೂಜಾರಿ, ಉಷಾ ಶರತ್, ಸುಚಿತ್ರಾ ವಿಶ್ವನಾಥ್, ಕೇಶಾವತಿ ಮೊದಲಾದವರಿದ್ದರು. ಈಶ್ವರಿ, ಶಂಕರ್, ಜಯಶ್ರೀ, ಅಭಿಷೇಕ್ ಹಾಡಿದರು.
ದತ್ತಿ ಇಲಾಖೆಯ ಸಹಾಯಕ ಆಯುಕ್ತ ಗೋವಿಂದ ನಾಯ್ಕ ಅಹವಾಲು ಸ್ವೀಕರಿಸಿ ಒಂದು ವಾರದ ಒಳಗೆ ತನಿಖೆಗೆ ಆದೇಶ ನೀಡುವುದಾಗಿ ಭರವಸೆ ನೀಡಿದರು. ತಹಸೀಲ್ದಾರ್ ಪೃಥ್ವಿ ಸಾನಿಕಂ, ದೇವಳ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್ ಮನವಿ ಸ್ವೀಕರಿಸಿದರು. ಬಳಿಕ ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಸ್ಥಳಕ್ಕಾಗಮಿಸಿ ಮನವಿ ಸ್ವೀಕರಿಸಿ, ನ್ಯಾಯ ಕೊಡಿಸುವ ಭರವಸೆ ನೀಡಿದರು. ಹೀಗಾಗಿ ಧರಣಿ ಹಿಂಪಡೆಯಲಾಯಿತು.