ಕಲಬುರಗಿಯಲ್ಲಿ ಸೆ.8 ರಿಂದ ರಾಜ್ಯಮಟ್ಟದ ಸ್ಕೇಟಿಂಗ್ ಸ್ಪರ್ಧೆ

IMG-20230905-WA0034
Published on


ವಿಜಯವಾಣಿ ಸುದ್ದಿಜಾಲ ಕಲಬುರಗಿ
ರಾಜ್ಯ ಮಟ್ಟದ ೩ನೇ ರ‍್ಯಾಕಿಂಗ್ ಸ್ಕೇಟಿಂಗ್ ಸ್ಪರ್ಧೆಯನ್ನು ಕಲಬುರಗಿ ನಗರದಲ್ಲಿ  ಸೆ.೮ ರಿಂದ ೧೦ರವರೆಗೆ ಮೂರು ದಿನಗಳ ಕಾಲ  ಹಮ್ಮಿಕೊಳ್ಳಲಾಗಿದೆ ಎಂದು ಜಿ¯್ಲÁ ಒಲಂಪಿಕ್ಸ್ ಅಸೋಸಿಯೇಷನ್ ಅಧ್ಯP್ಷÀರಾದ ಶಾಸಕ  ಶಶೀಲ್ ನಮೋಶಿ ಮತ್ತು ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಮುಖ್ಯಸ್ಥ ರವಿ ಸಂಚಾರ  ತಿಳಿಸಿದರು.
ನಗರದ ಕಪನೂರ ಕೈಗಾರಿಕಾ ಪ್ರದೇಶದಲ್ಲಿ ಮೂರು ದಿನ ಸ್ಕೇಟಿಂಗ್ ಸ್ಪರ್ಧೆ ಜಿಲ್ಲಾ ಒಲಂಪಿಕ್ಸ್  ಅಸೋಸಿಯೇಷನ್ ಮತ್ತು ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ  ಜರುಗಲಿದೆ. ಇದೇ ಮೊದಲ ಸಲ ಕಲಬುರಗಿಯಲ್ಲಿ ರಾಜ್ಯಮಟ್ಟದ ಸ್ಕೇಟಿಂಗ್ ಸ್ಪರ್ಧೆ ಜರುತ್ತಿದೆ ಎಂದು ಜಂಟಿಯಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೊದಲ ರ‍್ಯಾಕಿಂಗ್ ಸ್ಪರ್ಧೆ ಚಿಕ್ಕಬಳ್ಳಾಪುರದಲ್ಲಿ, ೨ನೇ ರ‍್ಯಾಕಿಂಗ್ ಸ್ಕೇಟಿಂಗ್ ಸ್ಪರ್ಧೆ ಬೆಂಗಳೂರಿನಲ್ಲಿ ಯಶಸ್ವಿಯಾಗಿ ಜರುಗಿದ್ದರಿಂದ ಉತ್ತರ ಕರ್ನಾಟಕ ಭಾಗದ ಸ್ಕೇಟಿಂಗ್ ಸ್ಪರ್ಧಿಗಳಿಗೆ ಅವಕಾಶ ಕಲ್ಪಿಸುವ ಉz್ದೆÃಶದಿಂದ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿಯಲ್ಲಿ  ಈ ಸಲ ೩ನೇ ರ‍್ಯಾಕಿಂಗ್ ಸ್ಕೇಟಿಂಗï ಸ್ಪರ್ಧೆ ಆಯೋಜಿಸಲಾಗುತ್ತಿದೆ  ಎಂದು ನಮೋಶಿ ತಿಳಿಸಿದರು. ೪ನೇ ರ‍್ಯಾಂಕಿAಗ್ ಸ್ಪರ್ಧೆ ಮೈಸೂರಿನಲ್ಲಿ ಆಯೋಜಿಸಲಾಗುತ್ತದೆ.
ಸ್ಪರ್ಧೆಗಳು ೫-೭ ವರ್ಷ, ೭ರಿಂದ ೯ ವರ್ಷ, ೯ವರ್ಷದಿಂದ ೧೧, ೧೧ ವರ್ಷದಿಂದ ೧೪ ವರ್ಷ, ೧೪ ವರ್ಷದಿಂದ ೧೭ ವರ್ಷದವರೆಗೆ ಮತ್ತು ೧೭ ವರ್ಷ ಮೇಲ್ಪಟ್ಟವರಿಗಾಗಿ ಸ್ಪರ್ಧೆಗಳು ಜರುಗಲಿವೆ. ಪ್ರತಿಯೊಂದು ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ ಸ್ಪರ್ಧಿಗೆ ೮ಅಂಕ ಹಾಗೂ ೧೦ ಸಾ.ರೂ.ನಗದು, ದ್ವಿತೀಯ ಸ್ಥಾನಕ್ಕೆ ೭ ಅಂಕ ಮತ್ತು ೭,೫೦೦ ರೂ.ನಗದು, ಮೂರನೇ ಸ್ಥಾನ ಪಡೆದವರಿಗೆ ೬ ಅಂಕ ಹಾಗೂ ೫ ಸಾ.ರೂ.ನಗದು ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.
ರಾಜ್ಯದ ಎಲ್ಲ ಜಿಲ್ಲೆಗಳಿಂದ ಸ್ಪರ್ಧಿಗಳು ಆಗಮಿಸಲಿದ್ದಾರೆ. ಕಲಬುರಗಿ ಜಿ¯್ಲÉಯಲ್ಲಿ ೩೦೦ಕ್ಕೂ ಹೆಚ್ಚಿನ ಸ್ಕೇಟಿಂಗ್ ಸ್ಪರ್ಧಾಳುಗಳಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ವಿಕ್ರಮ ದರ್ಶನಾಪುರ, ಜಯಕುಮಾರ ಮತ್ತು ಸ್ಮತಿ ಇದ್ದರು.
====

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net