ವಿಚಾರ ಸಂಕಿರಣ

Environment
Published on

ಬೆಂಗಳೂರು: ಸಂಯುಕ್ತ ಹೋರಾಟ - ಕರ್ನಾಟಕ ಸಂಘಟನಾ ಸಮಿತಿ ವತಿಯಿಂದ ಸೆ. 10ರಂದು ‘ನೀರಿನ ಬಿಕ್ಕಟ್ಟು, ಹವಾಮಾನ ಬದಲಾವಣೆ ಹಾಗೂ ಕೃಷಿ ಮೇಲಿನ ಪರಿಣಾಮಗಳು ಮತ್ತು ನೀರು, ಭೂಮಿ, ಖನಿಜ ಇತ್ಯಾದಿ ನೈಸರ್ಗಿಕ ಸಂಪನ್ಮೂಲಗಳ ಸರಕೀಕರಣ’ ವಿಷಯ ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣ ಆಯೋಜಿಸಲಾಗಿದೆ.

ನಗರದ ಶಿವಾನಂದ ವೃತ್ತದ ಬಳಿಯ ಗಾಂಧಿ ಭವನದಲ್ಲಿ ಬೆಳಗ್ಗೆ 10.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಎಐಕೆಎಸ್ (ಆಜಯ್ ಭವನ್) ರಾಜ್ಯಾಧ್ಯಕ್ಷ ಡಾ. ಸಿದ್ದನಗೌಡ ಪಾಟೀಲ್, ಪರಿಸರ ವಿಜ್ಞಾನಿ ಡಾ. ನಾಗೇಶ್ ಹೆಗಡೆ, ಕೆಆರ್‌ಆರ್‌ಎಸ್‌ನ ರಾಜ್ಯಾಧ್ಯಕ್ಷರಾದ ಎಚ್. ಆರ್. ಬಸವರಾಜಪ್ಪ, ಬಡಗಲಪುರ ನಾಗೇಂದ್ರ, ಸಿಐಟಿಯು ರಾಜ್ಯಾಧ್ಯಕ್ಷೆ ಎಸ್. ವರಲಕ್ಷ್ಮಿ, ಜನಾಂದೋಲನ ಮಹಾಮೈತ್ರಿ ಸಂಚಾಲಕ ಎಸ್. ಆರ್. ಹಿರೇಮಠ್ ಮೊದಲಾದವರು ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net