ಮಾ.14ಕ್ಕೆ ಧಾರವಾಡದಲ್ಲಿ ರಾಜ್ಯ ಮಟ್ಟದ ಪಗಡಿ ಸ್ಪರ್ಧೆ

pagadi
pagadi
Published on

ಧಾರವಾಡ: ತಾಲೂಕಿನ‌ ಕೊಟಬಾಗಿ ಗ್ರಾಮದ ರುದ್ರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಗ್ರಾಮದೇವಿ ಪಗಡಿ ಸಂಘದ ವತಿಯಿಂದ ಮಾ.14 ರಂದು ರುದ್ರಸ್ವಾಮಿ ದೇವಸ್ಥಾನ ಆವರಣದಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕಿನ ಪಗಡಿ ಸ್ಪರ್ಧೆ ಆಯೋಜಿಸಲಾಗಿದೆ.

ಭಾನುವಾರ ರಾತ್ರಿ 9ಕ್ಕೆ ಸ್ಪರ್ಧೆ ಆರಂಭವಾಗಲಿದ್ದು, ಶಾಸಕ ಅಮೃತ ದೇಸಾಯಿ ಉದ್ಘಾಟಿಸಲಿದ್ದಾರೆ. ಪ್ರಥಮ ಬಹುಮಾನ 25,001 ರೂ., ದ್ವಿತೀಯ ಬಹುಮಾನ 15,001 ರೂ., ತೃತೀಯ ಬಹುಮಾನ 10,001 ರೂ. ಹಾಗೂ ನಾಲ್ಕನೆಯದಾಗಿ 5,001 ರೂ.ನಗದು ಬಹುಮಾನ ನೀಡಲಾಗುತ್ತಿದೆ‌.‌ ಸ್ಪರ್ಧೆಗೆ 801 ರೂ. ಪ್ರವೇಶ ಶುಲ್ಕ ಇದ್ದು, ಆಯಾ ತಂಡದವರು ತಮ್ಮ ಹಾಸಂಗಿ, ಕಂಬಳಿ, ವಾಟೆ ಮತ್ತು ಕವಡಿಯನ್ನು ತರಬೇಕು. ಹೆಚ್ಚಿನ ಮಾಹಿತಿಗಾಗಿ 9901983102, 6364690399, 9739265777, 9686913919 ಹಾಗೂ 7829087609 ಸಂಖ್ಯೆ ಸಂಪರ್ಕಿಸಲು ಕೋರಲಾಗಿದೆ.

ಗ್ರಾಪಂ ಅಧ್ಯಕ್ಷ ಮಹಾಂತಯ್ಯ ಹಿರೇಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ತಾಲೂಕು ಪಂಚಾಯಿತಿ ಅಧ್ಯಕ್ಷ ರವಿವರ್ಮ ಪಾಟೀಲ, ಧಾರವಾಡ ಎಪಿಎಂಸಿ ಮಾಜಿ ಅಧ್ಯಕ್ಷ ವಿಜಯ ಕುರಕುರಿ, ಗ್ರಾಪಂ ಮಾಜಿ ಸದಸ್ಯ ಬಸವರಾಜ ಜೀವಣ್ಣವರ ಹಾಗೂ ಪ್ರಶಾಂತ ಕೇಕರೆ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.‌

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net