ರಾಜ್ಯಮಟ್ಟದ ಆರೋಗ್ಯ ಮೇಳ ಇಂದು

22Savadatti1
Published on

ಸವದತ್ತಿ: ಪಟ್ಟಣದಲ್ಲಿ ಮಾ.23ರಂದು ರಾಜ್ಯಮಟ್ಟದ ಉಚಿತ ಬೃಹತ್​ ಆರೋಗ್ಯ ಮೇಳ ಹಮ್ಮಿಕೊಳ್ಳಲಾಗಿದೆ. ೇತ್ರದ ಜನರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ವಿಶ್ವಾಸ ವೈದ್ಯ ತಿಳಿಸಿದರು.

ಇಲ್ಲಿನ ಪದಕಿಪುರಂನ ಶಾಸಕರ ನಿವಾಸದಲ್ಲಿ ಶನಿವಾರ ಆರೋಗ್ಯ ಮೇಳ ಕುರಿತಾದ ಸಭೆಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಬಡವರು, ದೀನದಲಿತರು ಹಾಗೂ ಅಸಹಾಯಕರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಸದುದ್ದೇಶದಿಂದ ಈ ಮಹತ್ವಪೂರ್ಣ ಯೋಜನೆ ಜಾರಿಗೆ ತಂದಿದೆ. ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ರಾಜ್ಯದ 300ಕ್ಕೂ ಅಧಿಕ ಸೂಪರ್​ ಸ್ಪೆಷಾಲಿಟಿ ತ ವೈದ್ಯರು ಆರೋಗ್ಯ ತಪಾಸಣೆ ನಡೆಸಿ ಉಚಿತ ಚಿಕಿತ್ಸೆ, ಔಷಧ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಆರೋಗ್ಯ ಮೇಳ ನಡೆಯಲಿರುವ ಸ್ಥಳಕ್ಕೆ ತೆರಳಲು ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಮಾ.23ರಂದು ಮಧ್ಯಾಹ್ನ 12 ಗಂಟೆಗೆ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆರೋಗ್ಯ ಸಚಿವ ದಿನೇಶ ಗುಂಡೂರಾವ್​, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸೇರಿ ಜಿಲ್ಲೆಯ ಸಚಿವರು, ಶಾಸಕರು ಹಾಗೂ ಉನ್ನತ ಅಧಿಕಾರಿಗಳು ಆಗಮಿಸಲಿದ್ದಾರೆ ಎಂದರು.

ಸಿಎಂ ಸಿದ್ದರಾಮಯ್ಯನವರು ಈ ಬಾರಿ ಬಜೆಟ್​ನಲ್ಲಿ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿಗೆ 200 ಕೋಟಿ ರೂ., ತಾಲೂಕು ಆಸ್ಪತ್ರೆಗೆ 150 ಕೋಟಿ ರೂ. ಮೀಸಲಿರಿಸಿದ್ದಾರೆ. ತಾಲೂಕು ಆಸ್ಪತ್ರೆಯಲ್ಲಿ 12 ಜನ ವೈದ್ಯರಿದ್ದು, ಪ್ರತಿನಿತ್ಯ 700&800 ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ನೀಡುತ್ತಿದ್ದಾರೆ. ಪ್ರತಿ ತಿಂಗಳು 300ಕ್ಕೂ ಅಧಿಕ ಹೆರಿಗೆ ಆಗುತ್ತವೆ. ಇದೀಗ 150 ಕೋಟಿ ರೂ. ಅನುದಾನದಲ್ಲಿ ಜಿ+4 ಮಾದರಿಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಅಭಿವೃದ್ಧಿಪಡಿಸಿಸುವ ಜತೆಗೆ ವೈದ್ಯರಿಗೆ ಸುಸಜ್ಜಿತ ವಸತಿಗೃಹ ನಿರ್ಮಿಸಿ ಕೊಡಲಾಗುವುದು ಎಂದು ತಿಳಿಸಿದರು.

ಡಿಎಚ್​ಒ ಡಾ.ಐ.ಪಿ.ಗಡಾದ ಮಾತನಾಡಿ, ಆರೋಗ್ಯ ಮೇಳಕ್ಕೆ ಜಿಲ್ಲಾದ್ಯಂತ ಈಗಾಗಲೇ 19 ಸಾವಿರ ಜನರು ನೋಂದಣಿ ಮಾಡಿಕೊಂಡಿದ್ದಾರೆ. 10&12ಸಾವಿರ ಜನ ಸೇರುವ ನಿರೀೆ ಇದೆ. ಬೃಹತ್​ ಆರೋಗ್ಯ ಮೇಳದ ಯಶಸ್ಸಿಗೆ ಎಲ್ಲ ಇಲಾಖೆ ಕೈಜೋಡಿಸಬೇಕು ಎಂದರು.

ತಹಸೀಲ್ದಾರ್​ ಮಲ್ಲಿಕಾರ್ಜುನ ಹೆಗ್ಗನ್ನವರ, ಆರೋಗ್ಯಾಧಿಕಾರಿ ಶ್ರೀಪಾದ ಸಬನೀಸ್​, ಪಿಐ ಧರ್ಮಾಕರ ಧರ್ಮಟ್ಟಿ, ಮುಖ್ಯಾಧಿಕಾರಿ ಸಂಗನಬಸಯ್ಯ, ವಿಜಯ ಸಂಗಪ್ಪಗೋಳ, ಶಿವಾನಂದ ಹೂಗಾರ, ಚಂದ್ರು ಶಾಮರಾಯನವರ, ಬಿ.ಎನ್​.ಪ್ರಭುನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net