15ನೇ ರಾಷ್ಟ್ರೀಯ ಚಾಂಪಿಯನ್​ಶಿಪ್​ನಲ್ಲಿ ರಾಜ್ಯದ ಕಳರಿಪಯಟ್ಟು ತಂಡಕ್ಕೆ ಪ್ರಶಸ್ತಿ

kalaripayattu
Published on

ಬೆಂಗಳೂರು: ಕಳರಿಪಯಟ್ಟು ಫೆಡರೇಷನ್​ ಇತ್ತೀಚೆಗೆ ಆಯೋಜಿಸಿದ್ದ 15ನೇ ರಾಷ್ಟ್ರೀಯ ಕಳರಿಪಯಟ್ಟು ಚಾಂಪಿಯನ್​ಶಿಪ್​ನಲ್ಲಿ ಕರ್ನಾಟಕ ತಂಡವು ಎರಡನೇ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. ಪುರಷರ ವಿಭಾಗದ ಕತ್ತಿ ಮತ್ತು ಗುರಾಣಿ ಸ್ಪರ್ಧೆಯಲ್ಲಿ ರಾಜ್ಯದ ಎ.ಎಂ. ಬಿನೀಷ್​ ಮತ್ತು ಹರಿನಾಥ್​ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

ಸಬ್​ ಜೂನಿಯರ್​ ಬಾಲಕಿಯರ ಮೇಪಯೆಟ್​ ವಿಭಾಗದಲ್ಲಿ ಧಾತ್ರಿ ಬೆಳ್ಳಿ ಹಾಗೂ ಜೂನಿಯರ್​ ಬಾಲಕಿಯರ ವಿಭಾಗದಲ್ಲಿ ರಂಜಿನಿ ಕಂಚಿನ ಪದಕ ಗೆದ್ದಿದ್ದಾರೆ.

ಪುರುಷರ ನೆಡುವಡಿ ಪಿಯಾಟ್​ ವಿಭಾಗದಲ್ಲಿ ಎ.ಎಂ. ಬಿನೀಷ್​ ಮತ್ತು ಹರಿನಾಥ್​ ಬೆಳ್ಳಿ ಪದಕ ಪಡೆದರೆ, ಪಿ. ಅಜಿತ್​ ಮತ್ತು ರೋಶನ್​ ರೊಮಾರಿಯೊ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಚುವಟ್ಟು ವಿಭಾಗದಲ್ಲಿ ತಂಕಾ ಸಲ್ವಂ ಮತ್ತು ಪಿ. ಅಜಿತ್​ ಹಾಗೂ ಉರುಮಿ ವೀಸಲ್​ ವಿಭಾಗದಲ್ಲಿ ಸಿ. ಜಿತು ಕಂಚಿನ ಪದಕ ಗೆದ್ದಿದ್ದಾರೆ. ಸ್ಪರ್ಧೆಯಲ್ಲಿ ವಿವಿಧ ರಾಜ್ಯಗಳಿಂದ 700ಕ್ಕೂ ಅಧಿಕ ಸ್ಪರ್ಧಾಳುಗಳು ಭಾಗವಹಿಸದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net