ಆನಗೋಡು ರಾಜ್ಯ ಹೆದ್ದಾರಿಯಲ್ಲಿ ಗುಂಡಿಗಳ ನರಕದರ್ಶನ

152
Published on

ಮಾಯಕೊಂಡ: ಹಡಗಲಿಯಿಂದ ಹೊಸದುರ್ಗ ಮಾರ್ಗವಾಗಿ ಬೆಂಗಳೂರನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿ-19 ದಾವಣಗೆರೆ ತಾಲೂಕಿನ ಆನಗೋಡು ಮೂಲಕ ಹಾದು ಹೋಗಿದೆ. ಆದರೆ, ಆನಗೋಡಿನಿಂದ ಕೊಡಗನೂರು ಕೆರೆ ಏರಿ ಕೊನೆವರೆಗಿನ ರಸ್ತೆ ಸಂಪೂರ್ಣ ಕಿತ್ತು ಹಾಳಾಗಿ, ದೊಡ್ಡ ಗುಂಡಿಗಳು ಏರ್ಪಟ್ಟು ವಾಹನ ಸವಾರರಿಗೆ ನಿತ್ಯ ನರಕದರ್ಶನ ಮಾಡಿಸುತ್ತಿವೆ.

ರಾಜ್ಯ ಹೆದ್ದಾರಿ-19ರ ರಸ್ತೆ ಮೂಲಕ ದಾವಣಗೆರೆ, ಚಿತ್ರದುರ್ಗ, ವಿಜಯನಗರ, ಹರಪನಹಳ್ಳಿ, ಹೊಸಪೇಟೆ, ಹಡಗಲಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಂದ ನಿತ್ಯ ಹಲವಾರು ಸರಕು ಸಾಗಣೆ ವಾಹನಗಳು ಸೇರಿದಂತೆ ದಾವಣಗೆರೆಯಿಂದ ಬೆಂಗಳೂರು, ಮೈಸೂರು, ಅರಸೀಕೆರೆಗೆ, ಹಾಸನ ಬಸ್‌ಗಳು ಈ ಹೆದ್ದಾರಿ ಮೂಲಕ ಸಂಚರಿಸುತ್ತವೆ,

ಆನಗೋಡು ಗ್ರಾಮದ ನಂಜುಂಡಪ್ಪ ಬಡಾವಣೆಗೆ ಹೊಂದಿಕೊಂಡ ಹೆದ್ದಾರಿ ಕಿತ್ತು ದೊಡ್ಡ ಗುಂಡಿಗಳು ಬಿದ್ದಿವೆ ಹಾಗೂ ನೇರ‌್ಲಿಗೆ ಗ್ರಾಮದ ಸಮೀಪದ ರಸ್ತೆ ತುಂಬೆಲ್ಲ ಗುಂಡಿಗಳು ಬಿದ್ದು 1 ಕಿ.ಮೀ. ನಷ್ಟು ರಸ್ತೆ ಅಕ್ಷರಶಃ ನೀರು ನಿಂತು ಕೆರೆಯಂತಾಗಿದೆ.

ತಾಲೂಕಿನ ಸುಲ್ತಾನಿಪುರ, ಕೊಡಗನೂರು ಕೆರೆಗಳ ಏರಿ ಮೇಲೆ ಹಾದು ಹೋಗಿರುವ ಹೆದ್ದಾರಿ ತುಂಬೆಲ್ಲ ಗುಂಡಿಗಳದ್ದೇ ಕಾರುಬಾರು.

ಆನಗೋಡು, ನೇರ‌್ಲಿಗೆ, ಸುಲ್ತಾನಿಪುರ, ಕೊಡಗನೂರು ಕೆರೆ ಏರಿಗಳ ಮೇಲಿನ ಹಾಳಾದ ಹೆದ್ದಾರಿ ರಸ್ತೆಯನ್ನು ತಕ್ಷಣ ದುರಸ್ತಿ ಮಾಡಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಕೊಡಗನೂರು ಕೆರೆ ಏರಿ ದುರಸ್ತಿ ಮತ್ತು ಏರಿಯ ಮೇಲಿನ ರಸ್ತೆ ಅಭಿವೃದ್ಧಿಗೆ 3 ಕೋಟಿ ರೂ. ಮಂಜೂರಾಗಿ ಟೆಂಡರ್ ಹಂತದಲ್ಲಿದ್ದು, ಟೆಂಡರ್ ಆದ ತಕ್ಷಣ ಕಾಮಗಾರಿ ಆರಂಭಿಸಲು ಸೂಚಿಸಿದೆ. ಆನಗೋಡಿನಿಂದ ನೇರ‌್ಲಿಗೆ ಸುಲ್ತಾನಿಪುರ ಗ್ರಾಮದವರೆಗೆ ಹೆದ್ದಾರಿ ಅಭಿವೃದ್ಧಿಗೆ ಅನುದಾನ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗುವುದು.ಕೆ.ಎಸ್. ಬಸವಂತಪ್ಪಶಾಸಕರು ಮಾಯಕೊಂಡ ಕ್ಷೇತ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net