ರಾಜ್ಯ ಕಾರ್ಯಕಾರಣಿ ಸಮಿತಿ ನಿರ್ದೇಶಕರ ಆಯ್ಕೆ

18 Hanumasagara 3
ಭಗೀರಥಸಾ ಕೆ.ಪಾಟೀಲ್
Published on

ಹನುಮಸಾಗರ: ಪಟ್ಟಣದ ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ(ಎಸ್‌ಎಸ್‌ಕೆ) ಸಮುದಾಯದ ಸ್ಥಳೀಯ ಅಧ್ಯಕ್ಷ ಭಗೀರಥ ಸಾ ಪಾಟೀಲ್ ಅವರನ್ನು ಸಮುದಾಯದ ರಾಜ್ಯ ಕಾರ್ಯಕಾರಣಿ ಸಮಿತಿ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಗಿದೆ.

ಸಮುದಾಯವನ್ನು ಮುಖ್ಯವಾಹಿನಿಗೆ ತರುವ ಹಾಗೂ ಕ್ಷತ್ರೀಯ ಕುಲದ ಗೌರವವನ್ನು ಕಾಪಾಡುವ ಜವಾಬ್ದಾರಿ ಇವರ ಮೇಲಿದೆ. ಸಮಾಜದ ಪ್ರತಿಯೊಂದು ಕಾರ್ಯ ಚಟುವಟಿಕೆಯಲ್ಲಿ ಉತ್ಸುಕತೆಯಿಂದ ನಡೆಸುತ್ತ ಹಾಗೂ ರಾಜ್ಯ ಸಮಿತಿಯು ಆಗಾಗ ನೀಡಿದ ಜವಬ್ದಾರಿಗಳನ್ನು ನಿಭಾಯಿಸುತ್ತ ಎಸ್‌ಎಸ್‌ಕೆ ಸಮುದಾಯದ ಏಳ್ಗೆಗೆ ಬಲ ತುಂಬಬೇಕು ಎಂದು ಸಮುದಾಯದ ರಾಜ್ಯಾಧ್ಯಕ್ಷ ಡಾ.ಶಶಿಕುಮಾರ ಮೆಹರವಾಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net