ನಾವಿ ಕ್ಷತ್ರೀಯ ಸಂಘಕ್ಕೆ ಆಯ್ಕೆ

IMG_20231006_204309_284-1.jpg
Published on

ಹುಬ್ಬಳ್ಳಿ: ಇಲ್ಲಿಯ ನಾವಿ ಕ್ಷತ್ರೀಯ ಸಂಘದ ನೂತನ ಪದಾಧಿಕಾರಿಗಳನ್ನು ಇತ್ತೀಚೆಗೆ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. 2023ರಿಂದ 2026ರ ವರೆಗೆ ಮೂರು ವರ್ಷದ ಅವಧಿಗೆ ಇವರನ್ನು ಆಯ್ಕೆ ಮಾಡಲಾಯಿತು.

ಬುಚ್ಚಣ್ಣ ಮುಷ್ಠಿಪಲ್ಲಿ ಅಧ್ಯಕ್ಷ, ನಾಗೇಶ ಕಡುಕುಂಟ್ಲ ಉಪಾಧ್ಯಕ್ಷ, ನರಸಿಂಹ ಕೋನಾಪುರಂ ಪ್ರಧಾನ ಕಾರ್ಯದರ್ಶಿ, ರವಿ ಅಮರಜಿಂತಾ ಸಹ ಕಾರ್ಯದರ್ಶಿ, ನರಸಿಂಹ ಅಪ್ಪರಾಲ ಖಜಾಂಚಿಯಾಗಿ ಹಾಗೂ ನಿರ್ದೇಶಕರಾಗಿ ಗೋವಿಂದ ಶಾಗಾಪುರ, ವೆಂಕಟೇಶ ಮಾನುಪಾಡು, ಆಂಜನೇಯ ಜಿಲ್ಲೇಡಿದಿನ್ನೆ, ಬಾಲರಾಜ ಮುಷ್ಠಿಪಲ್ಲಿ, ವೆಂಕಟೇಶ ಗೊಂಡ್ಯಾಲ, ನರಸಿಂಹ ಹಡಪದ ಅವರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net