ವಲಸೆ ತಡೆಗೆ ವಸತಿ ಶಾಲೆ ಆರಂಭಿಸಿ : ನ್ಯಾ.ಮರಿಯಪ್ಪ ಸಲಹೆ

22 ydg 01
ಯಾದಗಿರಿಯಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಗಾರದಲ್ಲಿ ನ್ಯಾಯಾಧೀಶ ಮರಿಯಪ್ಪ ಮಾತನಾಡಿದರು. ಪ್ರೇಮಮೂರ್ತಿ, ಡಾ.ಹಣಮಂತ ಕರಡಿ, ಸಿ.ಆರ್.ಕುಂಬಾರ, ಮಂಜುಳಾ ಇತರರಿದ್ದರು.
Published on

ಗಿರಿನಾಡಿನಲ್ಲಿ ವಲಸೆ ತಡೆಗಟ್ಟುವಲ್ಲಿನ ಸವಾಲುಗಳು ಕುರಿತ ಕಾರ್ಯಗಾರ

ವಿಜಯವಾಣಿ ಸುದ್ದಿಜಾಲ ಯಾದಗಿರಿ

ಗುಳೆ ಹೋಗುವುದಕ್ಕೆ ಬ್ರೇಕ್ ಹಾಕುವುದರ ಜತೆಗೆ ಮಕ್ಕಳ ವಲಸೆ ತಡೆಗಟ್ಟಲು ಪ್ರತಿ ತಾಲೂಕಿನ ವಲಯ ಮಟ್ಟದಲ್ಲಿ ೧೦ ಕಿ.ಮೀ ವ್ಯಾಪ್ತಿಯೊಳಗೆ ಒಂದರAತೆ ವಲಸೆ ವಸತಿಯುಕ್ತ ಶಾಲೆಗಳನ್ನು ಆರಂಭಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮರಿಯಪ್ಪ ಹೇಳಿದರು.

ಜಿ¯್ಲÁ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರಿನ ಸಾಥಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ `ವಲಸೆ ತಡೆಗಟ್ಟುವಲ್ಲಿನ ಸವಾಲುಗಳು' ವಿಷಯ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಹೀಗೆ ಮಾಡುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕು ಎಂದರು.

`ವಲಸೆ ದೊಡ್ಡ ಪಿಡುಗಾಗಿ ಪರಿಣಮಿಸಿದೆ. ಅದರಲ್ಲೂ ಯಾದಗಿರಿ ಜಿಲ್ಲೆಯಲ್ಲಿ ಅತ್ಯಧಿಕವಾಗಿದೆ'. ಹೀಗಾಗಿ ಪಾಲಕರೊಂದಿಗೆ ಮಕ್ಕಳು ವಲಸೆ ಹೋಗುವುದರಿಂದ ಅವರ ಶಿಕ್ಷಣ,ಆರೋಗ್ಯ ಮತ್ತು ಮುಂದಿನ ಜೀವನದ ಮೇಲೆ ಪರಿಣಾಮವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಅಂತಹ ಮಕ್ಕಳ ಕಲಿಕೆಗೆ ಅನುವು ಮಾಡಿಕೊಡಲು ಗಂಭೀರ ಚಿಂತನೆ ನಡೆಯಬೇಕು ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರೇಮಮೂರ್ತಿ, ಮಕ್ಕಳ ರಕ್ಷಣೆ ಮತ್ತು ಪೋಷಣೆಗೆ ಸಂಬAಧಿಸಿದAತೆ ಸರ್ಕಾರ ಮತ್ತು ಸಂಘ-ಸAಸ್ಥೆಗಳು ಪರಸ್ಪರ ಕೂಡಿಕೊಂಡು ಕೆಲಸ ಮಾಡಿದರೆ ಮಾತ್ರ ಯಶಸ್ಸಿಯಾಗಲು ಸಾಧ್ಯ ಎಂದರು.

ಮಕ್ಕಳು ವಲಸೆ ಹೋಗುವುದನ್ನು ತಡೆÀಗಟ್ಟಲೇ ಬೇಕು, ನಿರ್ಲಕ್ಷÈ ಮಾಡಿದರೆ, ಅವರ ಭವಿಷ್ಯಕ್ಕೆ ಪೆಟ್ಟು ಬೀಳುತ್ತದೆ. ಸಾಥಿ ಸಂಸ್ಥೆ ಸೇರಿದಂತೆ ಎಲ್ಲ ಸಂಸ್ಥೆಗಳು ಹೊಸ ನೆಲೆಗಟ್ಟಿನಲ್ಲಿ ರೂಪರೇಷೆಗಳನ್ನು ಸಿದ್ದಪಡಿಸಿ ನಿಗದಿತ ಗುರಿಯೊಂದಿಗೆ ಕೆಲಸ ಮಾಡುವ ಮೂಲಕ ವಲಸೆ ತಡೆಗಟ್ಟಬೇಕು. ಅಲ್ಲದೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು ಎಂದು ತಿಳಿಸಿದರು.

ಜಿ¯್ಲÁ ಮಕ್ಕಳ ಕಲ್ಯಾಣ ಸಮಿತಿ ಅಧ್ಯP್ಷÀ ಡಾ.ಹಣಮಂತ ಕರಡಿ ಮಾತನಾಡಿ, ವಲಸೆ ಮಕ್ಕಳ ಸಮಸ್ಯೆಗಳ ಕುರಿತು ಆಯೊಜಿಸಿದ ಕಾರ್ಯಾಗಾರ ಜಿ¯್ಲೆಯಲ್ಲಿ ಮೊಟ್ಟ ಮೊದಲನೆಯಾದಾಗಿದೆ. ಇದು ಹೊಸ ಬಗೆಯ ಚಿಂತನೆ ಕ್ರಮವಾಗಿದೆ. ಇಂತಹ ಕಾರ್ಯಕ್ರಮಗಳು ಜಿ¯್ಲÉಯಲ್ಲಿ ಹೆಚ್ಚಾಗಬೇಕು ಅಂದಾಗ ಮಾತ್ರ ಸಮಾಜದ ಸಮಸ್ಯೆಗಳನ್ನು ಯಾವುದೇ ಹಂತದ¯್ಲÁದರೂ ಸರಿಪಡಿಸಬಹುದು ಎಂದು ಹೇಳಿದರು.

ಸಾಥಿ ಸಂಸ್ಥೆ ನಿರ್ದೇಶಕ ಬಸವರಾಜ ಶಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾರ್ವಜನಿಕ ಶಿP್ಷÀಣ ಇಲಾಖೆ ವಿಷಯ ಪರಿವೀP್ಷÀಕ ಹಣಮಂತ, ಸಂಶೋಧಕ ಡಾ.ಸಿ.ಆರ್.ಕಂಬಾರ ಪಿಎಸ್‌ಐ ಮಂಜುಳಾ, ಉಪನ್ಯಾಸಕರಾದ ಸಿದ್ಧರಾಜರೆಡ್ಡಿ, ಸಾಬರೆಡ್ಡಿ ಬಂಗಾರಿ ಮತ್ತು ಗುರುಪ್ರಸಾದ ವೈದ್ಯ, ಗೌರೀಶ್ವರಯ್ಯ, ಡಾ.ಎಸ್.ಹೆಚ್.ಮುದ್ನಾಳ ಇತರರಿದ್ದರು. ಮರಿಯಪ್ಪ ನಂದಿಹಾಳ ನಿರೂಪಿಸಿದರು, ಮೌನೇಶ ಕುನ್ನುರು ವಂದಿಸಿದರು.

ಸಂಕಷ್ಟದಲ್ಲಿರುವ ಮಕ್ಕಳ ಸಹಾಯಕ್ಕಾಗಿ ಕೆಲಸ ಮಾಡುವ ರಾಷ್ಟಿçÃಯ ಸಂಸ್ಥೆಯಾಗಿದೆ.ವಲಸೆ ಮಕ್ಕಳ ಸಮಸ್ಯೆಗಳಿಗೆ ಸಂಬAಧಿಸಿದAತೆ ತಾತ್ಕಾಲಿಕ ಮತ್ತು ಶಾಶ್ವತ ಪರಿಹಾರ ಕಲ್ಪಿಸಲು ಹೊಸ ಯೋಜನೆ ರೂಪಿಸಿಕೊಂಡಿದೆ. ಬರುವ ದಿನಗಳಲ್ಲಿ ವಲಸೆ ಮಕ್ಕಳ ಸುಧಾರಣೆಗೆ ಸಂಬAಧಿಸಿದAತೆ ಸರ್ಕಾರಿ ಇಲಾಖೆಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಇನ್ನೂ ಹೆಚ್ಚಿನ ಸಹಕಾರ ನೀಡಿದರೆ, ಕಾರ್ಯಗತಗೊಳಿಸಲು ಅನುವು ಆಗಲಿದೆ.

| ಬಸವರಾಜ ಶಾಲಿ ಸಾಥಿ ಸಂಸ್ಥೆ ನಿರ್ದೇಶಕ

--

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net