ಚಿಕ್ಕಂದಿನಲ್ಲೇ ಓದಿನಲ್ಲಿ ತೊಡಗಿ

FotoJet
Published on

ದೇವಿಹಳ್ಳಿ ಟೋಲ್ನ ಮುಖ್ಯಸ್ಥ ಬಿಪಿನ್ ಬಿಹಾರಿ ಸಲಹೆ

ಕುದೂರು: ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಿಂದಲೇ ಓದಿನಲ್ಲಿ ತೊಡಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ದೇವಿಹಳ್ಳಿ ಟೋಲ್ನ ಮುಖ್ಯಸ್ಥ ಬಿಪಿನ್ ಬಿಹಾರಿ ಹೇಳಿದರು.

ಸೋಲೂರಿನ ಸರ್ಕಾರಿ ಮಾದರಿ ಪ್ರಾಥಮಿಕ ಪಾಠಶಾಲೆಯಲ್ಲಿ ಶನಿವಾರ ಕ್ಯೂಬ್ ರೂಟ್ ಫೌಂಡೇಶನ್ ಹಾಗೂ ನೆಲಮಂಗಲ ದೇವಿಹಳ್ಳಿ ಎಕ್ಸ್‌ಪ್ರೆಸ್‌ವೇ ಪ್ರೈವೇಟ್ ಲಿಮಿಟೆಡ್ ವತಿಯಿಂದ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ಚಿಕ್ಕ ವಯಸ್ಸಿನಲ್ಲಿ ಓದಿನಲ್ಲಿ ತೊಡಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಯಶಸ್ಸು ಕಾಣಬೇಕು. ಮುಂದಿನ ಸಿಇಟಿ, ನೀಟ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಪ್ರತಿದಿನ ಕನಿಷ್ಠ 6 ಗಂಟೆ ವ್ಯಾಸಂಗ ಮಾಡಬೇಕು. ಇಂದು ನಮ್ಮ ಸಂಸ್ಥೆ ನೀಡುತ್ತಿರುವ ಪ್ರೋತ್ಸಾಹ ಧನ ನಿಮ್ಮ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂದು ಆಶಿಸಿದರು.

ವೇದಿಕೆಯಲ್ಲಿದ್ದ ಗಣ್ಯರು, ತಲಾ ₹10 ಸಾವಿರದಂತೆ 11 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಿದರು.

ಮುಖ್ಯಶಿಕ್ಷಕ ಚಂದ್ರಶೇಖರಯ್ಯ, ಕುದೂರು ಪೊಲೀಸ್ ಠಾಣೆ ಎಎಸ್‌ಐ ರಾಮಕೃಷ್ಣಪ್ಪ, ನೆಲಮಂಗಲ ದೇವಿಹಳ್ಳಿ ಎಕ್ಸ್‌ಪ್ರೆಸ್‌ವೇ ಪ್ರೈವೇಟ್ ಲಿಮಿಟೆಡ್‌ನ ಹರಿಬಾಬು, ಮಾನವ ಸಂಪನ್ಮೂಲ ಅಧಿಕಾರಿ ರವಿ, ಆನಂದ್ ಮಾನಿಕಮ್, ನೇತಾಜಿ, ದಾಮೋದರ್, ಶಿವಶಂಕರ್, ಜಯರಾಮೇಗೌಡ, ರಾಮ್ ಬಾಬು, ಚಂದ್ರಮೌಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net