

ಯಳಂದೂರು: ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಸೋಮವಾರ 5 ವರ್ಷಗಳಿಗೊಮ್ಮೆ ನಡೆಯುವ ಜಾತ್ರೆಗೆ ಗ್ರಾಮದಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.
ಗ್ರಾಮದ ಮಾರಮ್ಮ ದೇವಸ್ಥಾನದಲ್ಲಿ ಬೆಳಗ್ಗೆ ಗ್ರಾಮ ದೇವತೆಯನ್ನು ವಿವಿಧ ಹೂವುಗಳಿಂದ ಅಲಂಕಾರ ಮಾಡಿ ನಂತರ ಬಾವಿಗೆರೆಯಲ್ಲಿ ಗಂಗೆಪೂಜೆ ನೆರವೇರಿಸಿ ಹಾಲರವಿ ಉತ್ಸವದೊಂದಿಗೆ ದೇಗುಲಕ್ಕೆ ಆಗಮಿಸಲಾಯಿತು.
ಸಂಜೆ ದೇವರ ಉತ್ಸವಮೂರ್ತಿಯನ್ನು ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. 5 ವರ್ಷಕ್ಕೆ ಒಮ್ಮೆ ನಡೆಯುವ ಹಬ್ಬವು ಫೆ.12ರಂದು ಪ್ರಾರಂಭವಾಗಿ ಸುಮಾರು 73 ದಿನಗಳ ಕಾಲ ಆದರೆ ಏ.26ರವರೆಗೆ ನಡೆಯುವುದು ವಿಶೇಷವಾಗಿದೆ.