ಕಲಬುರಗಿ: ಮ¯್ಲÁಬಾದ್ ಏತ ನೀರಾವರಿ ಕಾಮಗಾರಿ ಶೀಘ್ರ ಪ್ರಾರಂಭಿಸದಿದ್ದರೆ ಮೂರು ಹಂತದ ಹೋರಾಟ ಮಾಡಬೇಕಾಗುತ್ತದೆ ಎಂದು ಮ¯್ಲÁಬಾದ್ ಏತ ನೀರಾವರಿ ರೈತ ಹೋರಾಟ ಸಮಿತಿ ಸಂಚಾಲಕ ಡಾ.ಮಹೇಶಕುಮಾರ ರಾಠೋಡ್ ಹೇಳಿದರು. ಟೆಂಡರ್ ಪ್ರಕ್ರಿಯೆ ಆರಂಭವಾಗಿತ್ತಾದರೂ ನನೆಗುದಿಗೆ ಬಿದ್ದಿದ್ದು, ಸ್ಥಳೀಯ ಶಾಸಕ-ಸಚಿವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹೀಗಾಗಿ ಮೂರು ಹಂತದ ಹೋರಾಟ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮೊದಲ ಹಂತದಲ್ಲಿ ಗುರುವಾರ ಸಚಿವ-ಶಾಸಕರು ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಕೆ, ೨ನೇ ಹಂತವಾಗಿ ಡಿ.೧೨ರಿಂದ ೧೪ರವರೆಗೆ ಏತ ನೀರಾವರಿ ವ್ಯಾಪ್ತಿಯ ಗ್ರಾಮ ಹಾಗೂ ಜೇವರ್ಗಿ ಕ್ಷೇತ್ರದ ಪ್ರಮುಖ ಹಳ್ಳಿಗಳಲ್ಲಿ ರೈತರ ಜಾಗೃತಿ ಜಾಥಾ ನಡೆಸಲಾಗುವುದು. ಇಷ್ಟರೊಳಗೆ ಸರ್ಕಾರ ಬೇಡಿಕೆಗೆ ಸ್ಪಂದಿಸದಿದ್ದರೆ ಡಿ.೧೬ರಂದು ೩ನೇ ಹಂತದಲ್ಲಿ ರೈತರು, ಎತ್ತು ಬಂಡಿಗಳ ಸಮೇತ ರಾಷ್ಟಿçÃಯ ಹೆz್ದÁರಿ ತಡೆ ನಡೆಸಲಾಗುವುದು ಎಂದು ಹೇಳಿದರು. ಬಾಬು ಪಾಟೀಲï, ಇಬ್ರಾಹಿಂ ಪಟೇಲï ಯಾಳವಾರ, ಮಹ್ಮದ್ ಚೌಧರಿ ಕೊಡಚಿ, ರಾಜಾ ಪಟೇಲï ಯಾಳವಾರ, ಗುರುನಾಥ ಸಾಹು ರಾಜವಾಳ, ಶಾಂತಯ್ಯ ಗುತ್ತೇದಾರ್, ಸಾಜೀದ್ ಅಹ್ಮದ್ ಇತರರಿದ್ದರು.