ರುದ್ರಭೂಮಿಯಲ್ಲಿ ವಿದ್ಯುತ್ ಚಿತಾಗಾರ ಆರಂಭಿಸಿ

ಸಂಡೂರಿನ ಬ್ರಾಹ್ಮಣ ಬೀದಿಯ ಶಂಕರ ಮಠದಲ್ಲಿ ಬ್ರಾಹ್ಮಣ ಸಮಾಜ, ಆರ್ಯವೈಶ್ಯ ಸಮಾಜ, ಅರ್ಕಸಾಲಿ ಸಮಾಜ, ಜೈನ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು ರುದ್ರಭೂಮಿ ಸಮಸ್ಯೆ ಕುರಿತು ಸಭೆ ಹಮ್ಮಿಕೊಳ್ಳಲಾಗಿತ್ತು. ಬ್ರಾಹ್ಮಣ ಸಮಾಜದ ಮುಖಂಡರಾದ ವಿ.ಎಲ್.ಜೋಷಿ, ಸತ್ಯನಾರಾಯಣ ಜೋಷಿ, ನಾರಾಯಣಾಚಾರ್, ಚಿದಂಬರ ನಾನಾವಟೆ, ಮರಾಠ ಸಮಾಜದ ನಾರಾಯಣ ನಿಂಬಾಳ್ಕರ್, ಜೈನ ಸಮುದಾಯದ ಮಾಂಗೀಲಾಲ್ ಶೇಟ್, ಅರ್ಕಸಾಲಿ ಸಮಾಜದ ರವಿಆಚಾರ್ ಇತರರಿದ್ದರು

Published on

ಸಂಡೂರು: ಪಟ್ಟಣದ ಬ್ರಾಹ್ಮಣ ಬೀದಿಯ ಶಂಕರಮಠದಲ್ಲಿ ಬುಧವಾರ ಬ್ರಾಹ್ಮಣ ಸಮಾಜ, ಆರ್ಯವೈಶ್ಯ ಸಮಾಜ, ಅರ್ಕಸಾಲಿ ಸಮಾಜ, ಜೈನ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು ಸಭೆ ಹಮ್ಮಿಕೊಂಡಿದ್ದರು.

ನಗರ ವ್ಯಾಪ್ತಿಯಲ್ಲಿನ ರುದ್ರಭೂಮಿಯ ಸಮಗ್ರ ನಿರ್ವಹಣೆ, ರಕ್ಷಣಾ ಗೋಡೆ, ಗೇಟ್ ನಿರ್ಮಾಣ, ಅಂತ್ಯ ಸಂಸ್ಕಾರ ನಡೆಸಲು ಬಂದ ಕುಟುಂಬದವರಿಗೆ ಸ್ನಾನ ಇತ್ಯಾದಿ ಕರ್ಮಗಳನ್ನು ನೆರವೇರಿಸುವ ಕೋಣೆಗಳ ನಿರ್ಮಾಣ ಹಾಗೂ ರುದ್ರಭೂಮಿಯಲ್ಲಿ ಮೃತರ ಅಂತಿಮ ಸಂಸ್ಕಾರ ನಡೆಸುವ ಸ್ಥಳದ ಮೇಲ್ಛಾವಣಿ ದುರಸ್ತಿ, ವಿದ್ಯುತ್ ಚಿತಾಗಾರದ ಆರಂಭ ಕುರಿತಂತೆ ರುದ್ರಭೂಮಿಯ ಕಾವಲುಗಾರನ ವೇತನ ಹೆಚ್ಚಿಸಿ, ಉದ್ಯಾನವನಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಚರ್ಚಿಸಲಾಯಿತು. ಬ್ರಾಹ್ಮಣ ಸಮಾಜದ ಮುಖಂಡರಾದ ವಿ.ಎಲ್.ಜೋಷಿ, ಸತ್ಯನಾರಾಯಣ ಜೋಷಿ, ನಾರಾಯಣಾಚಾರ್, ಚಿದಂಬರ ನಾನಾವಟೆ, ಪ್ರಶಾಂತ ಕುಲಕರ್ಣಿ, ಕುಮಾರಶಾಸ್ತ್ರಿ, ಮರಾಠ ಸಮಾಜದ ನಾರಾಯಣ ನಿಂಬಾಳ್ಕರ್, ಜೈನ ಸಮುದಾಯದ ಮಾಂಗೀಲಾಲ್ ಶೇಟ್, ಅರ್ಕಸಾಲಿ ಸಮಾಜದ ರವಿಆಚಾರ್, ಕಾರ್ತಿಕೇಶ್ ಆಚಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net