ಕೂರುಳಿ-ಎಮ್ಮೆಮಾಡು ರಸ್ತೆ ಮಧ್ಯೆ ನೀರು ನಿಂತಿರುವುದು

ಕೂರುಳಿ-ಎಮ್ಮೆಮಾಡು ರಸ್ತೆ ಮಧ್ಯೆ ನೀರು ನಿಂತಿರುವುದು
Published on

ನಾಪೋಕ್ಲು: ಕೂರುಳಿ-ಎಮ್ಮೆಮಾಡು ರಸ್ತೆ ದುಸ್ಥಿತಿಯ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾಪೋಕ್ಲುವಿನಿಂದ ಕೂರಳಿ ಮುಖಾಂತರ ಎಮ್ಮೆಮಾಡಿಗೆ ತೆರಳುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಭಾನುವಾರ ಸುರಿದ ಮಳೆಗೆ ರಸ್ತೆಹೊಂಡಗಳಲ್ಲಿ ಕೆಸರು ನೀರು ತುಂಬಿಕೊಂಡು ಸಂಚಾರಕ್ಕೆ ತೊಂದರೆಯಾಗಿದೆ. ಜನಸಾಮಾನ್ಯರು ನಡೆದಾಡುವಂತೆ ಇಲ್ಲ. ಸಣ್ಣ ವಾಹನಗಳು ಚಲಿಸಲು ಕಷ್ಟಕರವಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ವಿವಿಧೆಡೆಗಳಿಂದ ಮಣ್ಣು ರಾಶಿಯನ್ನು ತಂದು ರಸ್ತೆಯ ಇಕ್ಕೆಲಗಳಲ್ಲಿ ಸುರಿಯುತ್ತಿದ್ದು, ರಸ್ತೆ ಕೆಸರುಮಯವಾಗಿದೆ. ಗ್ರಾಮ ಪಂಚಾಯಿತಿ ರಸ್ತೆ ದುಸ್ಥಿತಿಯ ಬಗ್ಗೆ ನಿಗಾವಹಿಸುತ್ತಿಲ್ಲ ಎಂದು ದೂರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net