ಮಕ್ಕಳ ಮೂಲಕ ರಂಗ ಪ್ರಸ್ತುತಿ ಕಾರ್ಯ ಸುಲಭವಲ್ಲ

kota (2)
Published on

ಕೋಟ: ಅತಿ ಕಡಿಮೆ ಸಮಯದಲ್ಲಿ ಶಬರಿ ಯಕ್ಷನಾಟಕ ಪ್ರಸ್ತುತಿ ಮನೋಜ್ಞವಾಗಿತ್ತು. ರಂಗದ ನಡೆಯನ್ನು ಅರಿತು ನಡೆಯಬೇಕಾದದ್ದನ್ನು ಗಮನಿಸಬೇಕಾದದ್ದು ಕಲಾವಿದರ ಕರ್ತವ್ಯ. ಮಕ್ಕಳ ಮೂಲಕ ರಂಗ ಪ್ರಸ್ತುತಿಯ ಕಾರ್ಯ ಸುಲಭವಲ್ಲ. ಇದನ್ನು ರಸರಂಗ ಸಾಧಿಸಿದೆ ಎಂದು ಪ್ರಾಂಶುಪಾಲ ದೇವದಾಸ್ ರಾವ್ ಕೂಡ್ಲಿ ಹೇಳಿದರು.

ತೆಕ್ಕಟ್ಟೆ ಹಯಗ್ರೀವದಲ್ಲಿ ಇತ್ತೀಚೆಗೆ ಕೋಟ ಸುಧಾ ಮಣೂರು ನಿರ್ದೇಶನದ ರಸರಂಗ ಪ್ರಸ್ತುತಿಯ ಶಬರಿ ನಾಟಕ ರಂಗ ಪ್ರಯೋಗ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಿರ್ದೇಶಕಿ ಸುಧಾ ಮಣೂರು ಮಾತನಾಡಿ, ರಸರಂಗ ಪ್ರಸ್ತುತಿಯ ಮೂರನೇ ಯಕ್ಷನಾಟಕ ಪ್ರಯೋಗವಿದು. ಶೂರ್ಪನಖ, ಅಹಲ್ಯಾ ಅಂತರಂಗ, ಶಬರಿ ಈ ನಾಟಕಗಳು ಇದುವರೆಗೆ ರಂಗ ಪ್ರಯೋಗಗೊಂಡಿದ್ದವು. ಪು.ತಿ.ನರಸಿಂಹ ಆಚಾರ್ಯರ ಹತ್ತನೇ ತರಗತಿಯ ಪಠ್ಯದಲ್ಲಿನ ಪದ್ಯವನ್ನಾಧರಿಸಿ ಇನ್ನಷ್ಟು ಪದ್ಯವನ್ನು ಜತೆಗೂಡಿಸಿ ತೋರಿಸಿದ ನಾಟಕ ಯಶಸ್ಸು ಕಂಡಿದೆ ಎಂದರು. ಕಾರ್ಯದರ್ಶಿ ವೆಂಕಟೇಶ ವೈದ್ಯ, ಪಾರ್ವತಿ, ಭಾಗ್ಯಲಕ್ಷ್ಮೀ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net