ದೇಶಕ್ಕಾಗಿ ಹೋರಾಡಿತ ಹುತಾತ್ಮ ಯೋಧರ ಸ್ಮರಣೆ

hbr
Published on

ಹೆಬ್ರಿ: ಭಾರತ ವಾತೆಯ ರಕ್ಷಣೆಗೆ ಪ್ರಾಣ ಪಣಕ್ಕಿಟ್ಟು ಹೋರಾಡಿದ ಹುತಾತ್ಮ ಯೋಧರನ್ನು ಸ್ಮರಿಸಬೇಕು. ಕಾರ್ಗಿಲ್ ಯುದ್ಧದ ಸಮಯದಲ್ಲಿ ಕಷ್ಟ, ಅಡೆತಡೆಗಳನ್ನು ಮೆಟ್ಟಿ ನಿಂತು ಭಾರತ ವಾತೆಯ ರಕ್ಷಣೆಗಾಗಿ ಹೋರಾಟ ವಾಡಿ ಹುತಾತ್ಮರಾದವರು ವಾದರಿ ವ್ಯಕ್ತಿಯಾಗಿದ್ದಾರೆ. ಇಂದಿನ ಪೀಳಿಗೆಯ ಯುವಜನರು ದೇಶ ಮತ್ತು ದೇಶವಾಸಿಗಳ ರಕ್ಷಣೆ ವಾಡುವುದು ತಮ್ಮ ಕರ್ತವ್ಯ ಎಂದು ನಿವೃತ್ತ ಸೈನಿಕ ಸುರೇಶ್ ಚಂದ್ರಶೇಖರ ರಾವ್ ಹೇಳಿದರು.

ಹೆಬ್ರಿ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಮೃತ ಭಾರತಿ ವಿದ್ಯಾಲಯ ಅಧ್ಯಕ್ಷ ಶೈಲೇಶ್ ಕಿಣಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯಸ್ಥರಾದ ಅಪರ್ಣಾ ಆಚಾರ್, ಶಕುಂತಲಾ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಮನಸ್ವಿ ಸ್ವಾಗತಿಸಿದರು. ಸೌಂದರ್ಯ ವಂದಿಸಿದರು. ಸೃಜನ್ ಭಟ್ ಅತಿಥಿಗಳನ್ನು ಪರಿಚಯಿಸಿದರು. ಧನ್ಯಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net