

ಸೋಮವಾರಪೇಟೆ: ಕೊಡಗು ಜಿಲ್ಲಾ ನ್ಯಾಯಾಂಗ ಇಲಾಖೆ ವತಿಯಿಂದ ಮಡಿಕೇರಿಯ ಮ್ಯಾನ್ಸ್ ಕಾಂಪೌಂಡ್‌ನಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಸಿಬ್ಬಂದಿ ಪಾಲ್ಗೊಂಡು ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಕೇರಂ ಡಬಲ್ಸ್‌ನಲ್ಲಿ ಪ್ರದೀಪ್ ಮತ್ತು ಬಿ.ಎಸ್. ಮಧು ಪ್ರಥಮ ಸ್ಥಾನ, ಮಹಿಳಾ ವಿಭಾಗದಲ್ಲಿ ಕೆ.ಆರ್. ಕುಸುಮಾ ಹಾಗೂ ಎನ್.ಜಿ. ರುಕ್ಮಿಣಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಭಾರದ ಗುಂಡು ಎಸೆತ ಪುರುಷರ ವಿಭಾಗದಲ್ಲಿ ಬಿ.ಎಸ್.ವಿನಯ್ (ಪ್ರ), ಮಹಿಳೆಯರ ವಿಭಾಗದಲ್ಲಿ ದೀಪಾಶ್ರೀ(ಪ್ರ), ಬಾಂಬ್ ಇನ್ ದ ಸಿಟಿ ಮಹಿಳೆಯರ ವಿಭಾಗದಲ್ಲಿ ಬಿ.ಎಂ.ಲತಾ(ಪ್ರ) ಬಹುಮಾನ ಪಡೆದಿದ್ದಾರೆ.
45 ವರ್ಷ ಮೇಲ್ಪಟ್ಟ ಮಹಿಳೆಯರ 200 ಮೀಟರ್ ಓಟದ ಸ್ಪರ್ಧೆಯಲ್ಲಿ ಬಿ.ಎಂ. ಲತಾ(ಪ್ರ), ಥ್ರೋಬಾಲ್ ಸ್ಪರ್ಧೆಯಲ್ಲಿ ಸೋಮವಾರಪೇಟೆ ತಂಡ ದ್ವಿತೀಯ ಸ್ಥಾನ, ಶಟಲ್ ಬ್ಯಾಡ್‌ಮಿಂಟನ್ ಸ್ಪರ್ಧೆಯಲ್ಲಿ ಕುಸುಮಾ ಹಾಗೂ ಚಂದ್ರಕಲಾ ದ್ವಿತೀಯ ಸ್ಥಾನ ಪಡೆದರು. ಪುರುಷರ ಹಗ್ಗ ಜಗ್ಗಾಟದಲ್ಲಿ ದ್ವಿತೀಯ ಸ್ಥಾನ ಪಡೆಯಿತು. 18 ರಿಂದ 40ರ ವಯೋಮಾನದ 100 ಮತ್ತು 200 ಮೀಟರ್ ಓಟದ ಸ್ಪರ್ಧೆಯಲ್ಲಿ ವರ್ಷಿತಾ ದ್ವಿತೀಯ ಸ್ಥಾನ, ಪುರುಷರ ಚೆಸ್ ಸ್ಪರ್ಧೆಯಲ್ಲಿ ರಮೇಶ್ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಹಿರಿಯ ಸಿವಿಲ್ ನ್ಯಾಯಾಧೀಶರಾದ ಗೋಪಾಲಕೃಷ್ಣ ವಿಜೇತರಿಗೆ ಬಹುಮಾನ ವಿತರಿಸಿದರು.