ನಕಲಿ ಬಿಲ್ ಹೊಂದಿದ್ದ ಲಾರಿ ವಾಪಾಸ್ ಕಳುಹಿಸಿದ ಸಿಬ್ಬಂದಿ

ನಕಲಿ ಬಿಲ್ ಹೊಂದಿದ್ದ ಲಾರಿ ವಾಪಾಸ್ ಕಳುಹಿಸಿದ ಸಿಬ್ಬಂದಿ
Published on

ಗುಂಡ್ಲುಪೇಟೆ: ಬಂಡೀಪುರ ಮಾರ್ಗವಾಗಿ ನಕಲಿ ಬಿಲ್ ಮೂಲಕ ಪ್ರವೇಶಿಸುತ್ತಿದ್ದ ಲಾರಿಯನ್ನು ಅರಣ್ಯಾಧಿಕಾರಿಗಳು ತಮಿಳುನಾಡಿಗೆ ವಾಪಸ್ ಕಳಿಸಿದ್ದಾರೆ.

ನೆರೆಯ ಕೇರಳ ಹಾಗೂ ತಮಿಳುನಾಡಿನಿಂದ ಬಂಡೀಪುರ ಮಾರ್ಗವಾಗಿ ಪ್ಲಾಸ್ಟಿಕ್, ಕ್ಲಿನಿಕಲ್ ಹಾಗೂ ಪುರಸಭೆಯ ತ್ಯಾಜ್ಯಗಳನ್ನು ತುಂಬಿಸಿಕೊಂಡು ಬರುತ್ತಿರುವ ಲಾರಿಗಳು ನಿರ್ಜನ ಪ್ರದೇಶಗಳಲ್ಲಿ ಬೀಸಾಡಿ ಹೋಗುತ್ತಿವೆ. ಈ ಬಗ್ಗೆ ಎಚ್ಚೆತ್ತ ವಿವಿಧ ಸಂಘಟನೆಗಳವರು ತ್ಯಾಜ್ಯತುಂಬಿದ ಲಾರಿಗಳನ್ನು ಒಳಗೆ ಬಿಡುತ್ತಿರುವ ಚೆಕ್‌ಪೋಸ್ಟ್ ಸಿಬ್ಬಂದಿ ವಿರುದ್ದ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಈ ಹಿನ್ನೆಲೆ, ಎಚ್ಚೆತ್ತ ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಚೆಕ್‌ಪೋಸ್ಟ್‌ಗಳಲ್ಲಿ ತೀವ್ರ ತಪಾಸಣೆ ನಡೆಸುತ್ತಿದ್ದಾರೆ.

ಶುಕ್ರವಾರ ಗೂಡಲೂರಿನಿಂದ ನಕಲಿ ಬಿಲ್ ಹಾಕಿಕೊಂಡು ಕೆಕ್ಕನಹಳ್ಳ ಚೆಕ್‌ಪೋಸ್ಟ್ ಮೂಲಕ ಗಡಿದಾಟಿದ ಲಾರಿಯ ಬಿಲ್‌ಅನ್ನು ಪರಿಶೀಲಿಸಿದಾಗ ಪ್ಲಾಸ್ಟಿಕ್ ಇರುವುದು ಕಂಡು ಬಂದ ಹಿನ್ನೆಲೆ ಬಂಡೀಪುರ ವಲಯಾರಣ್ಯಾಧಿಕಾರಿ ಎನ್.ಮಹದೇವ ಹಾಗೂ ಸಿಬ್ಬಂದಿ ಲಾರಿಯನ್ನು ವಾಪಸ್ ಕಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net