ಮಿತಿಗಿಂತ ಹೆಚ್ಚಿನ ದಾಸ್ತಾನು ಸಂಗ್ರಹಿಸಿದವರ ವಿರುದ್ಧ ಕಾನೂನು ಕ್ರಮ ಎಚ್ಚರಿಕೆ

Togari
Published on

ಸರ್ಕಾರದಿಂದ ಆಹಾರ ದಾಸ್ತಾನು ಮಿತಿ ನಿಗದಿ:

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಪ್ರಸ್ತುತ ದಿನಗಳಲ್ಲಿ ತೊಗರಿಬೇಳೆ, ಉದ್ದಿನಬೇಳೆ ಹಾಗೂ ಗೋಧಿಯ ಬೆಲೆ ಏರಿಕೆಯಾಗುತ್ತಿರುವ ಕಾರಣ ಸದರಿ ಅಗತ್ಯ ವಸ್ತುಗಳ ವ್ಯವಹಾರ ಮಾಡುವ ಸಗಟು ವ್ಯಾಪಾರಸ್ಥರು, ಚಿಲ್ಲರೆ ವ್ಯಾಪಾರಸ್ಥರು, ದಾಲ್‌ಮಿಲ್ ಮಾಲೀಕರು ಮತ್ತು ಸಂಗ್ರಹಣಾದಾರರು ಅಗತ್ಯ ವಸ್ತುಗಳನ್ನು ಸರ್ಕಾರದ ನಿಯಮಾನುಸಾರ ಸಂಗ್ರಹಣೆಯ ಮಿತಿಗಿಂತ ಹೆಚ್ಚಿಗೆ ಸಂಗ್ರಹಿಸಿ ದಾಸ್ತಾನೀಕರಿಸುವ ಸಂಭವವಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕಲಬುರಗಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ  ಉಪನಿರ್ದೇಶಕ ಶಾಂತಗೌಡ ಜಿ. ಗುಣಕಿ ಹಾಗೂ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಮದ ಪಟೇಲ್ ಅವರು ಜಂಟಿಯಾಗಿ  ಕಲಬುರಗಿ ನಗರದ ನೆಹರು ಗಂಜ್, ಕಪನೂರು ಹಾಗೂ ನಂದೂರು ಕೈಗಾರಿಕಾ ಪ್ರದೇಶದಲ್ಲಿನ ಹಲವಾರು ದಾಲ್‌ಮಿಲ್ ಹಾಗೂ ವೇರ್‌ಹೌಸ್‌ಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿ ದಾಸ್ತಾನವನ್ನು ಪರಿಶೀಲಿಸಿದರು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net