

ನೆಲ್ಯಾಡಿ: ಆರ್ಲ ಸೇಂಟ್ ಮೇರಿಸ್ ಚರ್ಚ್‌ನ ಯುವ ಟಕ ಸೀರೋ ಮಲಬಾರ್ ಯೂತ್ ಮೂವ್‌ಮೆಂಟ್ ನೇತೃತ್ವದಲ್ಲಿ ಸೇಂಟ್ ಮೇರಿಸ್ ಟ್ರೋಫಿ ಷಟ್ಲ್ ಬಾಡ್ಮಿಂಟನ್ ಪಂದ್ಯಾಟ ನಡೆಯಿತು.
ನೆಲ್ಯಾಡಿಯ ಎಲೈಟ್ ಇಂಡೋರ್ ಕೋರ್ಟ್‌ನಲ್ಲಿ ನಡೆದ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಗಳಿಂದ ಮೂವತ್ತಕ್ಕಿಂತ ಹೆಚ್ಚು ತಂಡಗಳು ಭಾಗವಹಿಸಿದ್ದವು. ಕುಲಶೇಖರ ಕೊರ್ಡಲ್ ಚರ್ಚ್‌ನ ಆರುಷ್ ಸೂರಜ್ ಪ್ರಥಮ, ನೆಲ್ಯಾಡಿಯ ಲಿಜೊ ಜೆಸ್ವಿನ್ ತಂಡ ದ್ವಿತೀಯ, ಬಜಗೋಳಿಯ ಅನೂಪ್ ಬಿಬಿನ್ ತೃತೀಯ ಹಾಗೂ ತೋಟತ್ತಾಡಿಯ ರೋಬಿನ್ ಟಿನೋಶ್ ಚತುರ್ಥ ಸ್ಥಾನ ಪಡೆದರು.
ನೆಲ್ಯಾಡಿ ಆರ್ಲ ಚರ್ಚ್‌ಗಳ ಧರ್ಮಗುರುಗಳಾದ ಶಾಜಿ ಮ್ಯಾಥ್ಯೂ, ಅಲೆಕ್ಸ್, ಯುವ ಮುಖಂಡರಾದ ಶ್ರೀಜಿತ್, ಶಾರೋನ್, ಜಿನು ಡಿವಿನ್, ಜಿತು, ಅಜಿತ್, ಪೃಥ್ವಿನ್ ಹಾಗೂ ಟ್ರಸ್ಟಿಗಳಾದ ಹೃದಿತ್, ಜೈಸನ್, ಜೋಸ್ಟಿನ್ ಉಪಸ್ಥಿತರಿದ್ದರು.