ಕಾರ್‌ ನಲ್ಲಿದ್ದ ಸೀರೆ ವಶ

SST team seize Saris from merchants car
Published on

ಸಿದ್ದಾಪುರ: ವ್ಯಾಪಾರಿಯೊಬ್ಬ ದಾಖಲೆ ಇಲ್ಲದೇ ಕಾರ್‌ ನಲ್ಲಿ ಸಾಗಿಸುತ್ತಿದ್ದ 45 ಸಾವಿರ ರೂ. ಮೌಲ್ಯದ 79 ಸೀರೆಗಳನ್ನು ವಿಧಾನಸಭೆ ಚುನಾವಣೆ ಎಸ್‌ಎಸ್‌ಟಿ ತನಿಖಾ ತಂಡದ ಅಧಿಕಾರಿಗಳು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಹುಬ್ಬಳ್ಳಿ ಕುಸಗಲ್ ರೋಡ್ ಹೇಮಂತನಗರದ ಅಶ್ವಿನ್ ರಾವುಲ್ ಎಂಬಾತ ಕಾರಿನಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ತಾಳಗುಪ್ಪ ಕಡೆಯಿಂದ ಸಿದ್ದಾಪುರ ಕಡೆಗೆ ಬರುತ್ತಿರುವ ವೇಳೆ ಚೂರಿಕಟ್ಟೆ ಚೆಕ್‌ಪೋಸ್ಟ್ನಲ್ಲಿ ಪರಿಶೀಲನೆ ನಡೆಸಲಾಗಿತ್ತು. ಡಿಕ್ಕಿಯಲ್ಲಿ ಚೀಲಗಳಲ್ಲಿ ಸೀರೆಗಳು ತುಂಬಿದ್ದವು. ಇನ್ಸ್ಪೆಕ್ಟರ್ ಕುಮಾರ ಕೆ. ಎಸ್‌ಎಸ್‌ಟಿ ಮ್ಯಾಜಿಸ್ಟೆçÃಟ್ ಬಸಪ್ಪ ತಿಮ್ಮಣ್ಣ ಬಂಡಿ, ಸಹಾಯಕ ಸತೀಶ ಚೆನ್ನಯ್ಯ, ಕೊರ್ಲಕೈ ಗ್ರಾಪಂ ಸೆಕ್ರೇಟರಿ ವಾಹನ ತಪಾಸಣೆ ನಡೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net