

ನೆಲಮಂಗಲ: ಹದಿನೈದು ವರ್ಷದ ಬಾಲಕಿಯೊಬ್ಬಳು ಡೆತ್ನೋಟ್ ಬರೆದಿದ್ದು ನೇಣಿಗೆ ಕೊರಳೊಡ್ಡಿ ಪ್ರಾಣ ಕಳೆದುಕೊಂಡು ದುರಂತ ಪ್ರಕರಣವೊಂದು ನಡೆದಿದೆ. ಬೆಂಗಳೂರು ಉತ್ತರ ತಾಲೂಕಿನಲ್ಲಿ ಈ ಘಟನೆ ನಡೆದಿದೆ.
ಬೆಂಗಳೂರು ಉತ್ತರ ತಾಲೂಕು ಸಿದ್ದನಹೊಸಹಳ್ಳಿ ಗ್ರಾಮದಲ್ಲಿ ಪ್ರೀತಿ (15) ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಈಕೆ ಹಿರಿಯೂರು ಮೂಲದ ವೆಂಕಟೇಶ್ ಎಂಬವರು ಪುತ್ರಿ. ಇವಳು ಚಿಕ್ಕಬಿದರಕಲ್ಲು ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.
'ನನ್ನ ಸಾವಿಗೆ ಯಾರೂ ಕಾರಣವಲ್ಲ, ಐ ಯಾಮ್ ಸಾರಿ ಅಪ್ಪ, ನನ್ನನ್ನು ಕ್ಷಮಿಸಿ..' ಎಂದು ಡೆತ್ನೋಟ್ ಬರೆದಿಟ್ಟು, ನೇಣು ಹಾಕಿಕೊಂಡಿದ್ದಾಳೆ. ಪರೀಕ್ಷೆಯ ದಿನಾಂಕ ಮರೆತು ಹೋದ ಹಿನ್ನಲೆಯಲ್ಲಿ ಬಾಲಕಿ ನೇಣಿಗೆ ಕೊರಳೊಡ್ಡಿದ್ದಾಳೆ ಎನ್ನಲಾಗುತ್ತಿದ್ದರೂ, ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದು ಇನ್ನೂ ಖಚಿತವಾಗಿ ತಿಳಿದುಬಂದಿಲ್ಲ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.