ಎಸ್ಸೆಸ್ಸೆಲ್ಸಿ ಫಲಿತಾಂಶ ಮಾಗಡಿ ಫಸ್ಟ್ ಚನ್ನಪಟ್ಟಣ ಲಾಸ್ಟ್

SSLC Result
Published on

ರಾಮನಗರ: ಶಾಲಾ ಶಿಕ್ಷಣ ಇಲಾಖೆಯ ಬಿಗಿ ನಿಲುವಿನ ಪರಿಣಾಮ ಜಿಲ್ಲೆ 26ನೇ ಸ್ಥಾನಕ್ಕೆ ಕುಸಿದು ಶೇ.71.16 ರಷ್ಟು ಫಲಿತಾಂಶ ದಾಖಲಿಸಿದೆ.

ಕೇವಲ ಕಳೆದ ವರ್ಷ 21ನೇ ಸ್ಥಾನದಲ್ಲಿದ್ದ ರಾಮನಗರ ಜಿಲ್ಲೆ ಎಸ್‌ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಶೇ.89.90ರಷ್ಟು ಫಲಿತಾಂಶ ದಾಖಲು ಮಾಡಿತ್ತು.

ಪ್ರಸ್ತುತ ಪ್ರಕಟಗೊಂಡಿರುವ ಫಲಿತಾಂಶದಲ್ಲಿ ಜಿಲ್ಲೆಯಲ್ಲಿ ಪರೀಕ್ಷೆ ಬರೆದಿದ್ದ 12681 ಮಂದಿ ವಿದ್ಯಾರ್ಥಿಗಳಲ್ಲಿ 9025 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 71.16 ಫಲಿತಾಂಶ ದಾಖಲು ಮಾಡಿದೆ. ಎಂದಿನಂತೆ ಬಾಲಕಿಯರು ಮೇಲುಗೈ ಸಾಧಿಸಿದ್ದರೆ, ಈ ಬಾರಿ ನಗರ ಪ್ರದೇಶದ ವಿದ್ಯಾರ್ಥಿಗಳು ಅಲ್ಪ ಪ್ರಮಾಣದ ಮುನ್ನಡೆ ಸಾಧಿಸಿದ್ದಾರೆ.

ಫಲಿತಾಂಶದ ವಿವರೆ

ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಲ್ಲಿ 254 ವಿದ್ಯಾರ್ಥಿಗಳು ಎ ಪ್ಲಸ್ ಗ್ರೇಡ್ ಪಡೆದು ಉತ್ತೀರ್ಣರಾಗಿದ್ದರೆ, 821 ವಿದ್ಯಾರ್ಥಿಗಳು ಎ ಗ್ರೇಡ್‌ನಲ್ಲಿ, 1346 ಮಂದಿ ಬಿ ಪ್ಲಸ್ ಗ್ರೇಡ್‌ನಲ್ಲಿ, 1939 ಮಂದಿ ವಿದ್ಯಾರ್ಥಿಗಳು ಬಿ ಗ್ರೇಡ್‌ನಲ್ಲಿ, 2619 ಮಂದಿ ಸಿ ಪ್ಲಸ್ ಗ್ರೇಡ್‌ನಲ್ಲಿ 1974 ಮಂದಿ ಸಿ ಗ್ರೇಡ್‌ನಲ್ಲಿ ಉತ್ತೀರ್ಣರಾಗಿದ್ದಾರೆ.

ಮಾಗಡಿ ಫಸ್ಟ್: ಈ ಬಾರಿಯ ಫಲಿತಾಂಶದಲ್ಲಿ ಮಾಗಡಿ ತಾಲೂಕು ಪ್ರಥಮ ಸ್ಥಾನ ಪಡೆದುಕೊಂಡಿದೆ. ಮಾಗಡಿಯ ಶೇ.80.36 ರಷ್ಟು ಫಲಿತಾಂಶ ದಾಖಲು ಮಾಡುವುದರೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಎರಡನೇ ಸ್ಥಾನ ರಾಮನಗರಕ್ಕೆ ದೊರೆತಿದ್ದು ಶೇ.69.96, ಮೂರನೇ ಸ್ಥಾನ ಕನಕಪುರಕ್ಕೆ ಲಭಿಸಿದ್ದು ಶೇ.69.53 ಹಾಗೂ ಕೊನೆಯ ಸ್ಥಾನವನ್ನು ಚನ್ನಪಟ್ಟಣ ಪಡೆದುಕೊಂಡಿದ್ದು ಶೇ. 66.81ರಷ್ಟು ಫಲಿತಾಂಶ ದಾಖಲಿಸಿದೆ. ಕಳೆದ ಬಾರಿ ಮಾಗಡಿ ಕೊನೆಯ ಸ್ಥಾನದಲ್ಲಿ ಹಾಗೂ ಚನ್ನಪಟ್ಟಣ ಮೊದಲ ಸ್ಥಾನದಲ್ಲಿ ಇತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net